ಕಾರ್ಕಳ: ಖಾಸಗಿ ಬಸ್‌ಗೆ ಬಿಎಂಡಬ್ಲ್ಯು ಕಾರು ಡಿಕ್ಕಿ ಹೊಡೆದ ಘಟನೆ ಕಾರ್ಕಳ-ಪಡುಬಿದ್ರಿ ಹೆದ್ದಾರಿಯ ದೂಪದಕಟ್ಟೆ ಜಂಕ್ಷನ್ ಬಳಿ ಡಿಕ್ಕಿ ಜೂನ್ 24 ರ ಮಂಗಳವಾರ ಮಧ್ಯಾಹ್ನ ನಡೆದಿದೆ.

ಮಂಗಳೂರಿನಿಂದ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಖಾಸಗಿ ಬಸ್ ಗೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬಿಎಂಡಬ್ಲ್ಯೂ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಬಿಎಂಡಬ್ಲ್ಯೂ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಘಟನಾ ಸ್ಥಳಕ್ಕೆ ತಕ್ಷಣ ಕಾರ್ಕಳ ಪೊಲೀಸರು ಧಾವಿಸಿ , ಪರಿಸ್ಥಿತಿಯನ್ನು ನಿಭಾಯಿಸಿ, ರಸ್ತೆಯನ್ನು ಸಾಮಾನ್ಯ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಕುರಿತು ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ವಿಶೇಷವಾಗಿ ಮಳೆಗಾಲದಲ್ಲಿ, ದೂಪದಕಟ್ಟೆ ಜಂಕ್ಷನ್ ಆಗಾಗ್ಗೆ ಅಪಘಾತ ವಲಯವಾಗಿ ಹೊರಹೊಮ್ಮಿರುವುದರಿಂದ ಸ್ಥಳೀಯ ನಿವಾಸಿಗಳು ಮತ್ತು ಪ್ರಯಾಣಿಕರು ಕಳವಳ ವ್ಯಕ್ತಪಡಿಸಿದ್ದಾರೆ. ಅತ್ತೂರು ಚರ್ಚ್ ಕಡೆಯಿಂದ ಹೆಚ್ಚಿನ ವೇಗದಲ್ಲಿ ಬರುವ ವಾಹನಗಳಿಂದ ಅಪಘಾತಗಳು ಸಂಭವ ಹೆಚ್ಚಾಗಿದೆ.



