Breaking
25 Sep 2026, Fri

ಪಡುಬಿದ್ರಿ: ಸ್ಕೂಟರ್‌ಗೆ ಕಾರು ಢಿಕ್ಕಿ- ಬಾಲಕಿಗೆ ಗಾಯ

ಪಡುಬಿದ್ರಿ: ಕಾರೊಂದು ಸ್ಕೂಟರ್‌ಗೆ ಢಿಕ್ಕಿಯಾದ ಘಟನೆ ಪಡುಬಿದ್ರಿಯಲ್ಲಿ ನಡೆದಿದೆ.

ರಾಜ್ಯ ಹೆದ್ದಾರಿ 1ರ ಪಡುಬಿದ್ರಿಯ ಮೋರ್ ಬಳಿಯಿಂದ ರಾಜ್ಯ ಹೆದ್ದಾರಿಯ ಮಧ್ಯಭಾಗಕ್ಕೆ ಹಠಾತ್ತನೇ ಬಂದ ಕಾರೊಂದು ಸ್ಕೂಟರ್‌ಗೆ ಢಿಕ್ಕಿಯಾದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಕಂಚಿನಡ್ಕ ನಿವಾಸಿ ವಿನಯಕುಮಾ‌ರ್ (46) ಅವರ ಮಗಳು ಯಶ್ವಿನಿ (16) ಅವರ ಕಾಲಿಗೆ ಗಾಯಗಳಾಗಿದ್ದು, ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *