ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ದಿನಾಂಕ 22. 06. 2025ರಂದು ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಗುರುತತ್ವ ಅನುಷ್ಠಾನದಲ್ಲಿ ಯುವವಾಹಿನಿ ಮಹತ್ತರ ಹೆಜ್ಜೆಯಿರಿಸಿದೆ : ಜಗನ್ನಾಥ ಬಂಗೇರ ನಿರ್ಮಲ್
ಯುವವಾಹಿನಿ ಸಂಸ್ಥೆಯು ಮನೆ ಮನ ಬೆಳಗುವ ಜ್ಯೋತಿಯಾಗಿ ಹೊಸ ಆಶಾಕಿರಣ ಮೂಡಿಸಿದೆ.
ನಾರಾಯಣಗುರುಗಳ ತತ್ವ ಪ್ರಚಾರ ಅನುಷ್ಠಾನದಲ್ಲಿ ಯುವವಾಹಿನಿಯ ಕಾರ್ಯಯೋಜನೆಗಳು ಯಶಸ್ವಿಯಾಗಿದೆ ಎಂದು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ನರಿಕೊಂಬು ಶ್ರೀ ನಾಲ್ಕೈತ್ತಾಯ ಪಂಜುರ್ಲಿ ನೆಮೋತ್ಸವ ಸಮಿತಿಯ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಲ್ ತಿಳಿಸಿದರು.

ಬಂಟ್ವಾಳ ಘಟಕದ ಶಿಸ್ತು ಅಚ್ಚುಕಟ್ಟುತನ ಮಾದರಿ : ಲೋಕೇಶ್ ಕೋಟ್ಯಾನ್
ಬಂಟ್ವಾಳ ಘಟಕದ ಶಿಸ್ತು ಅಚ್ಚುಕಟ್ಟುತನ ಇತರರಿಗೆ ಮಾದರಿ ಎಂದು ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್ ಕೂಳೂರು ತಿಳಿಸಿದರು. ನಿಕಟಪೂರ್ವ ಅಧ್ಯಕ್ಷ ಹರೀಶ್ ಕೋಟ್ಯಾನ್ ಕುದನೆ 27 ಸದಸ್ಯರ ನೂತನ ಕಾರ್ಯಕಾರಿ ಸಮಿತಿಯನ್ನು ಸಭೆಗೆ ಪರಿಚಯಿಸಿದರು.

ನೂತನ ಅಧ್ಯಕ್ಷರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ ನಾಗೇಶ್ ಪೂಜಾರಿ ನೈಬೇಲು ಮಾತನಾಡಿ, ತನ್ನ ಬಲಿಷ್ಠ ತಂಡ ಹಾಗೂ ಹಿರಿಯರ ಮಾರ್ಗದರ್ಶನದ ಮೂಲಕ ಒಂದು ವರ್ಷವನ್ನು ಯಶಸ್ವಿಯಾಗಿ ಮುನ್ನಡೆಸುವ ಆತ್ಮವಿಶ್ವಾಸ ಇದೆ ಎಂದರು. ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಗುರುಕೃಪಾ ಯುವಸಂಚಯ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿದರು, ಯುವಸಂಚಯ ಹೆಸರು ಸೂಚಿಸಿದ ಧನುಷ್ ಮದ್ವ ಹಾಗೂ ಅಕ್ಷರ ವಿನ್ಯಾಸಗಾರ ದಿನಕರ್ ಡಿ ಬಂಗೇರ ಇವರನ್ನು ಗೌರವಿಸಲಾಯಿತು. ಸಂಪಾದಕ ರಾಜೇಶ್ ಸುವರ್ಣ ವಿಶೇಷಾಂಕದ ಮಾಹಿತಿ ನೀಡಿದರು, ಈ ಸಂದರ್ಭದಲ್ಲಿ ಸಂಪಾದಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಯುವವಾಹಿನಿ ಬಂಟ್ವಾಳ ಘಟಕದ ಸ್ಥಾಪಕ ಅಧ್ಯಕ್ಷ ಬಿ ತಮ್ಮಯರ ನೆನಪಿನ ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಯ ಬಹುಮಾನವನ್ನು ಪ್ರದಾನ ಮಾಡಲಾಯಿತು. ವಿಜೇತರ ಪರವಾಗಿ ರೂಪಕಲಾ ಆಳ್ವ ಅನಿಸಿಕೆ ವ್ಯಕ್ತಪಡಿಸಿದರು.

ಬಂಟ್ವಾಳ ತಾಲೂಕು ಪತ್ರಕರ್ತರಿಗೆ ಸುದ್ದಿಸನ್ಮಿತ್ರ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಬಿಲ್ಲವ ಬ್ರಿಗೇಡ್ ಸಂಸ್ಥಾಪಕ ಸದಾನಂದ ಪೂಜಾರಿ, ಗುರುತತ್ವವಾಹಿನಿ ಭಜನಾ ಸಂಕೀರ್ತನೆಯ ರೂವಾರಿ ಪ್ರಜಿತ್ ಅಮೀನ್ ಏರಮಲೆ, ಯುವಸಂಚಯದ ಸಂಪಾದಕ ರಾಜೇಶ್ ಸುವರ್ಣ ಇವರುಗಳಿಗೆ ಗೌರವಾಭಿನಂದನೆ ಪ್ರದಾನಿಸಲಾಯಿತು.
ಗುರುತತ್ವವಾಹಿನಿ ಆತಿಥ್ಯ ವಹಿಸಿದ ಯುವವಾಹಿನಿ ಸದಸ್ಯ ಕುಟುಂಬಿಕರಿಗೆ, ಯುವವಾಹಿನಿ ಕೇಂದ್ರ ಸಮಿತಿಯ ಪದಾಧಿಕಾರಿಗಳು ಹಾಗೂ ಮಾಜಿ ಅಧ್ಯಕ್ಷರಿಗೆ ಯುವಸಂಚಯ ನೀಡಿ ಗೌರವಿಸಲಾಯಿತು. ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಕೊಲ್ಯ ಘಟಕದ ಅಧ್ಯಕ್ಷೆ ಸುಧಾ ಸುರೇಶ್, ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಶುಭ ಹಾರೈಸಿದರು.

ಯುವವಾಹಿನಿ ಬಂಟ್ವಾಳ ಘಟಕದ ಸಲಹೆಗಾರರಾಗಿ ಆಯ್ಕೆಯಾದ ಟಿ ರಾಮಚಂದ್ರ ಸುವರ್ಣ ಹಾಗೂ ಒಂದು ವರ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ, ಕಾರ್ಯದರ್ಶಿ ಚೇತನ್ ಮುಂಡಾಜೆ , ಕೋಶಾಧಿಕಾರಿ ಗೀತಾ ಜಗದೀಶ್ ಇವರುಗಳನ್ನು ಘಟಕದ ಮಾಜಿ ಅಧ್ಯಕ್ಷರುಗಳು ಅಭಿನಂದಿಸಿದರು
ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಉಮೇಶ್ ಬಾಯಾರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಚೇತನ್ ಮುಂಡಾಜೆ ವಾರ್ಷಿಕ ವರದಿ ಮಂಡಿಸಿದರು, ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ ಪ್ರಸ್ತಾವನೆ ಮಾಡಿದರು, ಕೋಶಾಧಿಕಾರಿ ಗೀತಾ ಜಗದೀಶ್ ಸ್ವಾಗತಿಸಿದರು, ನೂತನ ಕಾರ್ಯದರ್ಶಿ ಮಧುಸೂದನ್ ಮದ್ವ ವಂದಿಸಿದರು, ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.
