Breaking
25 Jul 2025, Fri

1937ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭ

ಮೋಂತಿಮಾರು ಮಂಚಿ ಶ್ರೀ ದುರ್ಗಾಪರಮೇಶ್ವರಿ ಸನ್ನಿಧಾನದಲ್ಲಿ ನವಜೀವನಕ್ಕೆ ಪಾದಾರ್ಪಣೆ ಮಾಡಿದ 40 ಶಿಬಿರಾರ್ಥಿಗಳು

ಬಂಟ್ವಾಳ : ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಮೋಂತಿಮಾರು ಮಂಚಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ವಿಟ್ಲ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ) ಬೆಳ್ತಂಗಡಿ, ತಾಲೂಕು ಜನಜಾಗೃತಿ ವೇದಿಕೆ ಬಂಟ್ವಾಳ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೋಂತಿಮಾರು ಮಂಚಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ, ಜಸ್ಟೀಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ (ಕ್ಷೇಮ), ಲಯನ್ಸ್ ಕ್ಲಬ್ ವಿಟ್ಲ ತಾಲೂಕು, ನವಜೀವನ ಸಮಿತಿ ಹಾಗೂ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ ವಿಟ್ಲ ತಾಲೂಕು, ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನ ಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಬೆಳ್ತಂಗಡಿ ಇದರ ವಿಸ್ತರಣಾ ಅಂಗವಾಗಿ ಜರುಗುವ 1937ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನ ಹಾಗೂ ಸಮಾರೋಪ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮೋಂತಿಮಾರು ಮಂಚಿ ಸಭಾಂಗಣದಲ್ಲಿ ನಡೆಯಿತು.

ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀಧಾಮ ಮಾಣಿಲ ರವರು
ದೇಶದಲ್ಲಿ ಮದ್ಯಮ ವರ್ಗದ ಜನರು ಅಭಿವೃದ್ಧಿ ಹೊಂದಿದರೆ ಅದು ನೇರವಾಗಿ ದೇಶದ ಪ್ರಗತಿಗೆ ಸಹಕಾರಿ ಆಗುತ್ತದೆ ಆದರೆ ಇದಕ್ಕೆ ತೊಡಕಾಗಿರುವುದು ಮದ್ಯವ್ಯಸನ ಇಂತಹ ಪಿಡುಗನ್ನು ನಿವಾರಿಸಲು ಧರ್ಮಸ್ಥಳದಿಂದ 30 ವರ್ಷದಿಂದ ಪ್ರಯತ್ನ ಪಡುತ್ತಿದೆ. ಒಂದು ಗ್ರಾಮದ ದೇವಸ್ಥಾನದ ಬ್ರಹ್ಮಕಲಶದಷ್ಟೇ ಶ್ರೇಷ್ಠವಾದದು ಧರ್ಮಸ್ಥಳದಿಂದ ನಡೆಯುವ ಮದ್ಯವರ್ಜನ ಶಿಬಿರ . ಮುಂದಿನ ದಿನಗಳಲ್ಲಿ ಒಳ್ಳೆಯ ಜೀವನ ನಡೆಸಿ ತಮ್ಮ ಮನೆ ಮನಗಳಲ್ಲಿ ಸಂತೋಷದಿಂದ ಬದುಕಬೇಕೆಂದು ಆಶೀರ್ವದಿಸಿ ತುಳುನಾಡಿನ ದೈವಗಳಿಗೆ ಪೂಜೆ ನೆಪದಲ್ಲಿ ಮಧ್ಯ ಇಡುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಬೇಕಾಗಿದೆ ಎಂದರು.

ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ ಪಾಯಸ್ ಕುಟುಂಬ ದಿನ ಕಾರ್ಯಕ್ರಮ ನಿರ್ವಹಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ, ಮಧ್ಯಪಾನ ದಂತ ದುಶ್ಚಟಗಳಿಂದ ಆಗುವ ಸಮಸ್ಯೆಗಳ ಬಗ್ಗೆ ನೈಜ ಘಟನೆಗಳನ್ನು ಶಿಬಿರಾರ್ಥಿಗಳಿಗೆ ತಿಳಿಸಿ, ಶಿಬಿರಾರ್ಥಿಗಳಿಂದ ಮಧ್ಯ ತ್ಯಜಿಸುವ ಸಂಕಲ್ಪ ಮಾಡಿಸಿದರು.

ಮುಖ್ಯ ಅತಿಥಿಗಳಾದ ಮಾಜಿ ಶಾಸಕ ರುಕ್ಮಯ ಪೂಜಾರಿ ಏಳ್ತೀಮಾರ್ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಯುವ ಮದ್ಯವರ್ಜನ ಶಿಬಿರದಿಂದ ಲಕ್ಷಕ್ಕೂ ಹೆಚ್ಚು ಜನ ಪಾನಮುಕ್ತರಾಗಿ ಉತ್ತಮ ಜೀವನ ನಡೆಸುತ್ತಿದ್ದಾರೆ ಅವರಂತೆಯೇ ಇಲ್ಲಿನ ಶಿಬಿರದಲ್ಲಿ ಭಾಗವಹಿಸಿದ 40 ಜನರು ಹೊಸ ಜೀವನ ಆರಂಭಿಸಿ ಉತ್ತಮ ವ್ಯಕ್ತಿಗಳಾಗಿ ಎಂದರು.

ಉದ್ಯಮಿ ಮಾಧವ ಮಾವೆ ಮಾತನಾಡಿ, ಮನಸ್ಥಿತಿ ಬದಲಾದರೆ ಪರಿಸ್ಥಿತಿ ತನ್ನಿಂದ ತಾನೇ ಬದಲಾಗುತ್ತದೆ
ಪೂಜ್ಯ ಖಾವಂದರ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಗ್ರಾಮದ ಅಭಿವೃದ್ಧಿ ದ್ರಷ್ಠಿಯಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ, ದೇವರು ನಮಗೆ ಕೊಟ್ಟ ಅವಕಾಶವನ್ನು ಸರಿಯಾಗಿ ಉಪಯೋಗಿಸಿದರೆ ಗೆಲುವು ಸಾಧಿಸಲು ಸಾಧ್ಯ ಅಂದರು.

ಅಧ್ಯಕ್ಷರು, 1937ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮೋಂತಿಮಾರು ಮಂಚಿಯ ಅಧ್ಯಕ್ಷರಾದ ಲ| ರಾಮ್ ಪ್ರಸಾದ್ ರೈ ತಿರುವಾಜೆ ಮಾತನಾಡಿ ಡಾ |ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುವ ಶಿಬಿರದಿಂದ ಇವತ್ತು 40 ಮನೆಯ ಬೆಳಕು ಬೆಳಗಿದೆ ಮತ್ತು ಈ ಮದ್ಯವರ್ಜನ ಶಿಬಿರದ ಅಧ್ಯಕ್ಷ ಸ್ಥಾನ ಸಿಕ್ಕಿರುವುದು ನನಗೆ ಬಯಸದೇ ಬಂದ ಭಾಗ್ಯ ಎಂದು ಹರ್ಷ ವ್ಯಕ್ತಪಡಿಸಿದರು.

ಮೋಂತಿಮಾರು ದೇವಸ್ಥಾನದ ಆಡಳಿತ ಮೊಕ್ತೇಸರರು ಹಾಗೂ 1937ನೇ ಮದ್ಯವರ್ಜನ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾದ ಸತೀಶ್ಚಂದ್ರ ಎಸ್ ಆರ್, ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದಲ್ಲಿ ಕೆಟ್ಟ ವಸ್ತುಗಳಿಗೆ, ವಿಷಯಗಳಿಗೆ ಆಕರ್ಷಣೆ ಜಾಸ್ತಿ, ಅಂತಹ ವಿಷಯಗಳಿಗೆ ಆಕರ್ಷಣೆಗೆ ಒಳಗಾಗದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಎಂದರು.


ಕಾರ್ಯಕ್ರಮದ ವೇದಿಕೆಯಲ್ಲಿ ಶ್ರೀಮತಿ ಲ|ದೇವಕಿ ಹೆಚ್ ನಿವೃತ್ತ ಮುಖ್ಯ ಶಿಕ್ಷಕರು. ಶ್ರೀ ಗಣೇಶ್ ಆಚಾರ್ಯ, ಜನಜಾಗೃತಿ ಯೋಜನಾಧಿಕಾರಿ ಪ್ರಾದೇಶಿಕ ಕಚೇರಿ ಉಡುಪಿ. ಶ್ರೀ ನಾರಾಯಣ ಶೆಟ್ಟಿ ಕುಲ್ಯಾರ್ ಅಧ್ಯಕ್ಷರು, ವಿಟ್ಲ ಪ್ರಾ.ವ್ಯ.ಸೇ.ಸ.ಸಂ ಕೊಡಂಗಾಯಿ, ಶ್ರೀ ನವೀನ್ ಚಂದ್ರ ಕಣಂತೂರು ಅಧ್ಯಕ್ಷರು, ಪ್ರ ಬ ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ, ಶ್ರೀ ದೇವಿಪ್ರಸಾದ್ ಶೆಟ್ಟಿ ಪಾಲ್ತಾಜೆ ಅಧ್ಯಕ್ಷರು, ಭಜನಾ ಪರಿಷತ್ ವಿಟ್ಲ ತಾಲೂಕು,
ಶ್ರೀ ಲ|ಅರವಿಂದ ರೈ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸಾಲೆತ್ತೂರು, ಶ್ರೀ ದಿವಾಕರ್ ನಾಯಕ್ ಅಧ್ಯಕ್ಷರು, ಮಂಚಿ ಒಕ್ಕೂಟ, ಶ್ರೀ ದಿನೇಶ್ ಶೆಟ್ಟಿ, ವಲಯಾಧ್ಯಕ್ಷರು ಸಾಲೆತ್ತೂರು ಒಕ್ಕೂಟ, ಶ್ರೀಮತಿ ತುಳಸಿ ವಲಯಾಧ್ಯಕ್ಷರು ಕಲ್ಲಡ್ಕ ಒಕ್ಕೂಟ ಶ್ರೀಮತಿ ಪ್ರಮೀಳಾ ವಲಯಾಧ್ಯಕ್ಷರು, ವಿಟ್ಲ ಒಕ್ಕೂಟ, ಶ್ರೀ ರಾಬರ್ಟ್ ಫೆರ್ನಾಂಡಿಸ್ ವಲಯಾಧ್ಯಕ್ಷರು ಪೆರ್ನೆ ಒಕ್ಕೂಟ. ಶ್ರೀ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ವಲಯಾಧ್ಯಕ್ಷರು, ಜನಜಾಗೃತಿ ವೇದಿಕೆ ಕೇಪು, ಶ್ರೀಮತಿ ಸವಿತಾ ಮೇಲ್ವಿಚಾರಕಿ ಸಾಲೆತ್ತೂರು ಶ್ರೀಮತಿ ಶಶಿಕಲಾ ಮೇಲ್ವಿಚಾರಕಿ ಮಂಚಿ, ನಿತೇಶ್ ಕೆ ಜನಜಾಗೃತಿ ಮೇಲ್ವಿಚಾರಕರು, ಶಿಬಿರಾಧಿಕಾರಿ ಶ್ರೀ ದಿವಾಕರ್ಆ ರೋಗ್ಯ ಸಹಾಯಕಿ ಶ್ರೀಮತಿ ನೇತ್ರಾವತಿ ರವರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳ ಮನೆಯವರು, ವಿಟ್ಲ ತಾಲೂಕಿನ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ವೇದಿಕೆ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ವಿಪತ್ತು ನಿರ್ವಹಣಾ ಸ್ವಯಂ ಸೇವಕರು , ಸೇವಾ ಪ್ರತಿನಿಧಿಗಳು, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

ವಿಟ್ಲ ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುರೇಶ್ ಗೌಡ ಸ್ವಾಗತಿಸಿ ವಲಯ ಮೇಲ್ವಿಚಾರಕಿ ಸವಿತಾ ವಂದಿಸಿದರು, ಶೌರ್ಯ ತಂಡದ ಗಣೇಶ್ ಶೆಟ್ಟಿ ನಿರೂಪಿಸಿದರು.

Leave a Reply

Your email address will not be published. Required fields are marked *