ಮಂಗಳೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆ ಇಲ್ಲಿ ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಝರ್ಸ್ ಲಿಮಿಟೆಡ್ ಪಣಂಬೂರ್ ಮಂಗಳೂರು ಇದರ ಸಿ ಎಸ್ ಆರ್ ಆಕ್ಟಿವಿಟಿ 2024- 25 ರ ಸ್ವಚ್ಛ ವಿದ್ಯಾಲಯ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ನೂತನ ಶೌಚಾಲಯದ ಲೋಕಾರ್ಪಣಾಯನ್ನು ಎಂ.ಸಿ.ಎಫ್ ನ ಮುಖ್ಯ ಉತ್ಪಾದನಾಧಿಕಾರಿ ಶ್ರೀ ಎಸ್. ಗಿರೀಶ್ ಅವರು ನೆರವೇರಿಸಿದರು.
ನಂತರ ಬೆಳ್ತಂಗಡಿ ತಾಲೂಕಿನ ಶಾಸಕರಾದ ಶ್ರೀ ಹರೀಶ್ ಪೂಂಜ ಇವರು ದೀಪ ಬೆಳಗುವ ಮುಖಾಂತರ ಉದ್ಘಾಟಿಸಿ ಗ್ರಾಮೀಣ ಶಾಲೆಯ ಬಲವರ್ಧನೆಗೆ ಶ್ರಮಿಸುತ್ತಿರುವ ಎಂ.ಸಿ.ಎಫ್ ನ ಕಾರ್ಯಗಳನ್ನು ಶ್ಲಾಘಿಸಿದರು.


ಗ್ರಾಮ ಪಂಚಾಯತಿ ಹೊಸಂಗಡಿ ಅಧ್ಯಕ್ಷರಾದ ಶ್ರೀ ಜಗದೀಶ್ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಶ್ರೀಮತಿ ಶಾಂತ ಕೃಷ್ಣಪ್ಪ, ಸದಸ್ಯರುಗಳಾದ ಕರುಣಾಕರ, ಪ್ರಕಾಶ್ ದೇವಾಡಿಗ, ನಾಗರತ್ನ, ಶಾಂತ, ಕಮಲ, ಎಂ.ಸಿ.ಎಫ್ ನ ಅಧಿಕಾರಿಗಳಾದ ಚೇತನ್ ಮೆಂಡೋನ್ಸ, ಡಾ. ಯೋಗೀಶ್, ದೀಕ್ಷಿತ್ ಶೆಟ್ಟಿ, ವಿವೇಕ್ ಕೋಟ್ಯಾನ್, ವಲಯ ಜನ ಜಾಗೃತಿ ವೇದಿಕೆಯ ತಾಲೂಕು ಸದಸ್ಯರಾದ ವಿಠ್ಠಲ್ ಸಿ ಪೂಜಾರಿ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಆರತಿ ಜೈನ್, ಶಾಲಾ ಎಸ್.ಡಿ. ಎಂ.ಸಿ ಅಧ್ಯಕ್ಷರಾದ ಶೇಖರ್ ಕುಲಾಲ್, ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಶಿಕ್ಷಕರು, ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಿಕ್ಷಕರಾದ ವಿಶ್ವನಾಥ ಗೌಡ ಸ್ವಾಗತಿಸಿ, ಮುಖ್ಯ ಶಿಕ್ಷಕರಾದ ನೀನಾ ಕುವೆಲ್ಲೋ ಧನ್ಯವಾದಗೈದರು. ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಎಂ.ಸಿ.ಎಫ್ ನಿಂದ ಶಾಲೆಗೆ ನೂತನ ಶೌಚಾಲಯ ಬರುವಲ್ಲಿ ಶಮಿಸಿದ ದಿ. ಹರಿಪ್ರಸಾದ್ ಇವರ ಕಾರ್ಯವನ್ನು ಸ್ಮರಿಸಲಾಯಿತು.

