Breaking
16 Jul 2026, Thu

ಕಾರವಾರ: ನೌಕಾದಳ ವ್ಯಾಪ್ತಿಗೆ ತೇಲಿದ ಬೋಟುಗಳ ವಶ- 6 ಮೀನುಗಾರರ ಬಂಧನ

ಕಾರವಾರ: ಅರಗಾ ಬಳಿಯ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟುಗಳು ಅಲೆಯ ಅಬ್ಬರಕ್ಕೆ ನೌಕಾದಳದ ವ್ಯಾಪ್ತಿಗೆ ತೇಲಿದ್ದು, ನೌಕಾದಳದವರು ಈ ಬೋಟುಗಳನ್ನು ವಶಕ್ಕೆ ಪಡೆದು, ಆರು ಮೀನುಗಾರರನ್ನು ಬಂಧಿಸಿ ಕಾರವಾರ ಗ್ರಾಮೀಣ ಠಾಣೆಗೆ ಒಪ್ಪಿಸಿದ್ದಾರೆ.

ಕಾರವಾರದ ಬೈತಕೋಲಿನ ರವಿ ನಾರಾಯಣ್ ಹರಿಕಾಂತ್ ಅವರ ಅರ್ಯಪರಮ್ ಬೋಟು ಮತ್ತು ರಾಜು ವಾಮಂತ್ ತಾಂಡೇಲ್ ಅವರ ಓಂ ಶ್ರೀ ಆರ್ಯದುರ್ಗ ಬೋಟುಗಳು ವಶವಾಗಿದ್ದು, ಲಕ್ಷಾಂತರ ಮೌಲ್ಯದ ಬಲೆಗಳು ಸಹ ನೌಕಾದಳದ ವಶದಲ್ಲಿವೆ.

ಮೀನುಗಾರರು ಬೋಟುಗಳು ಹಾಗೂ ಬಂಧಿತರನ್ನು ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *