ಮಂಗಳೂರು: ತುಳುವಿಗೆ ರಾಜ್ಯ ಭಾಷೆಯ ಸ್ಥಾನಮಾನ ನೀಡಬೇಕೆಂಬ ಆಗ್ರಹ ಹೆಚ್ಚುತ್ತಿರುವ ನಡುವೆಯೇ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಿಂದ ಹೊರಡಿಸಿದ ಪತ್ರವೊಂದು ವಿವಾದಕ್ಕೆ ಕಾರಣವಾಗಿದೆ.

ಈ ಹಿಂದೆ, ಕಾರ್ಕಳದ ನಾಗರೀಕ ಸೇವಾ ಸಂಘದ ಮುರಳೀಧರ್ ಅವರು, ಗ್ರಾಮ ಸಭೆಗಳಲ್ಲಿ ತುಳು ಭಾಷೆ ಬಳಸಬಾರದು ಎಂಬ ಮನವಿಯನ್ನು ಜಿ.ಪಂ. ಸಿಇಒಗೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಜಿಲ್ಲಾಧಿಕಾರಿಗಳು ‘ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಎಲ್ಲಾ ತಾ.ಪಂ. ಇಒಗಳಿಗೆ ಸೂಚನೆ ನೀಡಿದ್ದಾರೆ.

ಈ ವಿಚಾರ ಬಹಿರಂಗವಾದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ತುಳು ನಾಡಿನ ಮೂಲ ಭಾಷೆಯಾಗಿದ್ದು, ಅದನ್ನು ತಡೆಹಿಡಿಯಲು ಆಗುತ್ತಿರುವ ಪ್ರಯತ್ನಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. “ತುಳುವಿಗೆ ನಿಷೇಧ ಆದರೆ ಉರ್ದು ಅಧಿಕೃತ?” ಎಂಬ ಪ್ರಶ್ನೆಗಳೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.

