ಬೆಂಗಳೂರು: ನಗರದ ಜಲ ಮಂಡಳಿ ಗುತ್ತಿಗೆದಾರರ ಸಂಘದ ವತಿಯಿಂದ ಆನಂದರಾವ್ ಸರ್ಕಲ್ ಬಳಿ ನೂತನ ಕಚೇರಿಯನ್ನು ಬಿ ಡಬ್ಲ್ಯೂ ಎಸ್ ಎಸ್ ಬಿ ಅಧ್ಯಕ್ಷರಾದ ಡಾ.ಪ್ರಸಾದ್ ಮನೋಹರ್ ರ ವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು 1960ನೇ ಇಸ್ವಿಯಲ್ಲಿ ಪ್ರಾರಂಭವಾದ ನಮ್ಮ ಜಲ ಮಂಡಳಿ ಇಂದಿಗೆ 40 ವರ್ಷ ವಾಗಿದ್ದು ನಮ್ಮಲ್ಲಿ ಎಲ್ಲಾ ಗುತ್ತಿಗೆದಾರರು ಒಳ್ಳೆಯ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಹಾಗೂ ಬೇರೆ ಕಾಮಗಾರಿಗಳಂತೆ ನಮ್ಮ ಗುತ್ತಿಗೆದಾರರ ಬಳಿ ಸಾಕಷ್ಟು ದೊಡ್ಡ ಮಟ್ಟದ ಹಣವಿಲ್ಲ ಸಣ್ಣಪುಟ್ಟ ಗುತ್ತಿಗೆದಾರರಿದ್ದು ಅವರ ಕಷ್ಟಗಳಿಗೆ ನಾನು ಸ್ಪಂದಿಸುತ್ತಾ ಬರುತ್ತಿದ್ದೇನೆ ಎಂದರು.

ಇನ್ನೂ ಹೆಚ್ಚು ಮಟ್ಟಕ್ಕೆ ಈ ಸಂಘ ಬೆಳೆಯಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅಭಿಯಂತರರಾದ ಸುರೇಶ್ ರವರು, ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಮಂಜುನಾಥ, ನಂದಕುಮಾರ್, ಡಾ. ಲಯನ್ ಭಾಸ್ಕರನ್ ಸೇರಿದಂತೆ ಇನ್ನು ಮುಂತಾದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

