ಸೀರೆ ಉಟ್ಟುಕೊಂಡು ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ನಲ್ಲಿ ಓಡಾಡಿದ ವ್ಯಕ್ತಿ ಅರೆಸ್ಟ್

ರಾಯಚೂರು: ಸೀರೆ ಉಟ್ಟುಕೊಂಡ ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ವಾರ್ಡ್ನಲ್ಲಿ ಓಡಾಡಿ ಆತಂಕ ಉಂಟು ಮಾಡಿದ ಘಟನೆ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಶರಣಪ್ಪ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಶರಣಪ್ಪ ರಾತ್ರೋರಾತ್ರಿ ಸೀರೆಯುಟ್ಟು ಆಸ್ಪತ್ರೆ ಎಮರ್ಜನ್ಸಿ ವಾರ್ಡ್ ಒಳಹೋಗುತ್ತಿದ್ದ. ಯಾವ ವಾರ್ಡ್ಗೆ ಹೋಗಬೇಕು, ಹೆಸರೇನು ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದು, ಈ ವೇಳೆ ಏನೇನೋ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.

ಹಸುಗೂಸು ಕಳ್ಳತನದ ಶಂಕೆ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು ಶರಣಪ್ಪನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈತ ತಾನು ಮಂಗಳಮುಖಿ ಎಂದು ಹೇಳಿಕೊಂಡಿದ್ದು, ಆಸ್ಪತ್ರೆಯಲ್ಲಿ ಮಲಗಲು ಹೋಗಿದ್ದೆ ಎಂದು ಹೇಳಿದ್ದಾನೆ.

ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *