Breaking
15 Jul 2026, Wed

ಬಿ.ಸಿ ರೋಡ್ ನಲ್ಲಿ ಹೃದಯಾಘಾತದಿಂದ ಯುವಕ ಸಾವು

ಬಂಟ್ವಾಳ: ಅವಿವಾಹಿತ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ತಾಲೂಕಿನ ಬಿಸಿರೋಡಿನಲ್ಲಿ ಜು.9ರಂದು ನಡೆದಿದೆ.

ರಾಜಸ್ಥಾನ ಮೂಲದ ನಟವರ್ ಸಿಂಗ್ (27) ಮೃತಪಟ್ಟ ಯುವಕನಾಗಿದ್ದಾನೆ.

ಬಿಸಿರೋಡಿನ ಹೃದಯಭಾಗದಲ್ಲಿ ಕಳೆದ ಕೆಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ನವರತನ್ ಇಲೆಕ್ಟ್ರಿಕಲ್ ಅಂಗಡಿಯಲ್ಲಿ ಈತ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.

ಕಳೆದ ಆರು ತಿಂಗಳ ಹಿಂದೆ ಈತನಿಗೆ ಹೃದಯ ನೋವು ಕಾಣಿಸಿಕೊಂಡಿದ್ದು ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಎನ್ನಲಾಗಿದೆ.

ಬುಧವಾರ ರಾತ್ರಿ ವೇಳೆ ಈತನಿಗೆ ತಲೆಸುತ್ತು ಬಂದಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ಹೋಗಿದ್ದರು, ಆಸ್ಪತ್ರೆಯ ಮೆಟ್ಟಿಲು ಹತ್ತುವ ವೇಳೆ ಬಿದಿದ್ದು,ಬಳಿಕ ಆತ ಸಾವನ್ನಪ್ಪಿದ್ದಾನೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ನಟವರ್ ಸಿಂಗ್ ಮೂಲತಃ ರಾಜಸ್ಥಾನದವನಾಗಿದ್ದರಿಂದ ಮೃತದೇಹವನ್ನು ವಿಮಾನದ ಮೂಲಕ ಅಲ್ಲಿಗೆ ಕೊಂಡುಹೋಗಲಾಗಿದೆ.

Leave a Reply

Your email address will not be published. Required fields are marked *