Breaking
30 Jul 2025, Wed

ಮಂಗಳೂರು: ಪುಟಾಣಿ ಶರಣ್ಯ ಶರತ್ ಕಪೋತಾಸನ ಭಂಗಿಗೆ ಎರಡು ವರ್ಲ್ಡ್ ರೆಕಾರ್ಡ್

ಮಂಗಳೂರು: ಪನ್ನೀರಿನ ಸೈಂಟ್ ಮೇರೀಸ್ ವಿದ್ಯಾಸಂಸ್ಥೆಯಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿರುವ ಕುಮಾರಿ ಶರಣ್ಯ ಶರತ್ ಅವರು ತನ್ನ ಎಂಟನೆಯ ವಯಸ್ಸಿನಲ್ಲಿ ಯೋಗಾಸನದ ಕಪೋತಾಸನದ ಭಂಗಿಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮತ್ತು ವರ್ಲ್ಡ್ ವೈಡ್ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾರೆ ಎಂದು ಹವ್ಯಾಸಿ ಈಜುಗಾರರಾದ ಲ|ಎ। ಚಂದ್ರಹಾಸ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸಾಧನೆ ಮಾಡಿರುವ ಅಂತಾರಾಷ್ಟ್ರೀಯ ಯೋಗಪಟು ಕವಿತಾ ಅಶೋಕ್ ಅತಿ ಚಿಕ್ಕ ವಯಸ್ಸಿನಿಂದಲೇ ತರಬೇತಿಯನ್ನು ಕೊಡುತ್ತಿದ್ದಾರೆ. ಇವರಿಗೆ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಮೇಝಿ ಎ.ಸಿ., ಶಿಕ್ಷಕಿ ವಿನುತಾ ಪ್ರವೀಣ್‌ ಬೆಂಬಲ ನೀಡುತ್ತಿದ್ದು ಮಂಗಳೂರು ಮಹಾನಗರ ಪಾಲಿಕೆಯ ಈಜುಕೊಳದ ವ್ಯವಸ್ಥಾಪಕರಾದ ರಮೇಶ್‌ ಬಿಜೈ ಮತ್ತು ಈಜಿನಲ್ಲಿ ಈ ಹಿಂದೆ ದಾಖಲೆ ಮಾಡಿರುವ ಚಂದ್ರಶೇಖ‌ರ್ ಸೂರಿಕುಮೇರಿ ಮಾರ್ಗದರ್ಶನ ನೀಡಿದ್ದಾರೆ.

ತಮಿಳುನಾಡಿನ ಹರಿಣಿತ ಬಿ.ಎಸ್. ಇವರ ಹೆಸರಿನಲ್ಲಿ ಇರುವ 15 ನಿಮಿಷದ ಕಪೋತಾಸನದ ದಾಖಲೆಯನ್ನು ಮುರಿದು ಈ ಸಾಧಕಿ ಒಂದು ಗಂಟೆ ಎರಡು ನಿಮಿಷದ ಅವಧಿಗೆ ಸಾಧಿಸಿ ಈ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಬಿಜೈ, ಚಂದ್ರಶೇಖ‌ರ್ ರೈ ಸೂರಿಕುಮೇರಿ ಜಾಯಿಂಟ್ ಸೆಕ್ರೆಟರಿ ಸಿಸ್ಟರ್ ಸೆಲಿನ್‌ವಿರ, ಉಪ ಪ್ರಾಂಶುಪಾಲರಾದ ಸಿಸ್ಟರ್ ಸಂತೋಷ್‌ ಮೇರಿ, ಸೋನಿಯಾ ಜೆ, ಶರಣ್ಯ ಶರತ್‌, ಯೋಗ ಶಿಕ್ಷಕಿ ಕವಿತಾ ಅಶೋಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *