ಉಡುಪಿ: ಹೆಬ್ರಿ ರಾಷ್ಟ್ರೀಯ ಹೆದ್ದಾರಿಯ ಎಸ್.ಆರ್. ಸ್ಕೂಲ್ ಬಳಿ ಕಾರು ಕಾಂಪೌಂಡ್ ಗೆ ಗುದ್ದಿದ ಘಟನೆ ನಡೆದಿದೆ.
ಹತ್ತಿರದಲ್ಲೇ ಶಾಲೆ ಇರುವುದರಿಂದ ವಿದ್ಯಾರ್ಥಿಗಳು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಆಗಿದ್ದರೆ ಬಾರಿ ಅನಾಹುತ ಸಂಭವಿಸಬಹುದಾಗಿತ್ತು ಎನ್ನಲಾಗಿದೆ.

ಈ ರಸ್ತೆ ಕಿರಿದಾಗಿದ್ದ ಸಂದರ್ಭದಲ್ಲಿ ಅನಾಹುತಗಳು ಕಡಿಮೆಯಿತ್ತು. ಈಗ ರಸ್ತೆ ಅಗಲೀಕರಣ ಆದ ಬಳಿಕ ಅನಾಹುತಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದೃಷ್ಟಾವಶಾತ್ ಕಾರಿನ ಚಾಲಕ ಪ್ರಾಣಾಯಾಪದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.



