ಗಾಳಿ-ಮಳೆಗೆ ಭಾರಿ ಹಾನಿ : ಮೆಸ್ಕಾಂ ಇಲಾಖೆಗೆ ಸೇರಿದ 16.45 ಕೋಟಿ ಮೌಲ್ಯದ ಆಸ್ತಿ ನಷ್ಟ

ಮಂಗಳೂರು: ಎಪ್ರಿಲ್ನಿಂದ ಜೂನ್ 15ರ ಅವಧಿಯಲ್ಲಿ ಗಾಳಿ-ಮಳೆಯಿಂದಾಗಿ ಮೆಸ್ಕಾಂ ವ್ಯಾಪ್ತಿಯ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 10,583 ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, 180 ಪರಿವರ್ತಕಗಳು ಹಾಗೂ 326.58 ಕಿ.ಮೀ. ವಿದ್ಯುತ್ ಮಾರ್ಗಗಳು ಹಾನಿಗೊಳಗಾಗಿದೆ.

ಒಟ್ಟು ₹16.45 ಕೋಟಿ ಮೊತ್ತದ ಆಸ್ತಿಗೆ ಹಾನಿಯಾಗಿದ್ದು, ದಕ್ಷಿಣ ಕನ್ನಡದಲ್ಲಿ ₹6.91 ಕೋಟಿ, ಚಿಕ್ಕಮಗಳೂರು ₹3.85 ಕೋಟಿ, ಉಡುಪಿ ₹3.73 ಕೋಟಿ ಹಾಗೂ ಶಿವಮೊಗ್ಗದಲ್ಲಿ ₹1.95 ಕೋಟಿಯಷ್ಟು ನಷ್ಟ ಸಂಭವಿಸಿದೆ.

ಹಾನಿಗೊಳಗಾದ 10,583 ಕಂಬಗಳಲ್ಲಿ 10,338 ಕಂಬಗಳನ್ನು ಈಗಾಗಲೇ ಬದಲಾಯಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *