ಮಂಗಳೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿ ನಿಗದಿ

ಮಂಗಳೂರು: ಕರಾವಳಿ ಭಾಗದಲ್ಲಿ ಮಳೆಯ ಆಭ೯ಟ ತೀವ್ರವಾಗಿದ್ದು, ಈ ಹಿನ್ನೆಲೆಯಲ್ಲಿ ಸುರತ್ಕಲ್-ನಂತೂರು ಜಂಕ್ಷನ್ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗಮಿತಿಯನ್ನು ಗಂಟೆಗೆ 50 ಕಿಲೋ ಮೀಟರ್ ಗೆ ನಿಗದಿಪಡಿಸಲಾಗಿದೆ.

ಈ ವೇಗಮಿತಿ ಸಪ್ಟೆಂಬ‌ರ್ ಅಂತ್ಯದ ವರೆಗೆ ಚಾಲ್ತಿಯಲ್ಲಿ ಇರಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಸುರತ್ಕಲ್- ನಂತೂರು ನಡುವಣ ಹೆದ್ದಾರಿ ಕೆಟ್ಟು ಹೋಗಿದ್ದು, ಘನ ವಾಹನ, ಲಘುವಾಹನ ಸೇರಿದಂತೆ ಎಲ್ಲಾ ವಾಹನಗಳು ಈ ಹೆದ್ದಾರಿಯನ್ನೇ ಬಳಸುತ್ತಿವೆ. ಕೆಲವು ವಾಹನಗಳು ಸಂಚರಿಸುತ್ತಿರುವ ವೇಳೆ ಹೊಂಡ ತಪ್ಪಿಸಲು ಹೋಗಿ ಅಪಘಾತಕ್ಕೀಡಾಗುತ್ತಿದೆ. ಈ ಕಾರಣಕ್ಕಾಗಿ ಸರ್ವೀಸ್ ರಸ್ತೆ ಇರುವ ಪಣಂಬೂರು, ಸುರತ್ಕಲ್, ಬೈಕಂಪಾಡಿ, ಕೂಳೂರು ಭಾಗಗಳಲ್ಲಿ ಈ ಸರ್ವೀಸ್ ರಸ್ತೆಯನ್ನೇ ಬಳಸಿ ದ್ವಿಚಕ್ರ ವಾಹನಗಳು ಸಂಚರಿಸುವುದು ಸೂಕ್ತ ಎಂದು ಎನ್‌ಎಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *