Breaking
19 Sep 2026, Sat

ಆಕಸ್ಮಿಕವಾಗಿ ಚರಂಡಿಗೆ ಜಾರಿ ಬಿದ್ದು ವ್ಯಕ್ತಿ ಸಾವು

ಉಡುಪಿ: ಮನೆಯ ಸಮೀಪದಲ್ಲಿದ್ದ ಚರಂಡಿಗೆ ಆಕಸ್ಮಿಕವಾಗಿ ಜಾರಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಉದ್ಯಾವರದ ಕೇದಾರ್ ನಿವಾಸಿ ರೊನಾಲ್ಡ್ ಫೆರ್ನಾಂಡಿಸ್ (52) ಎಂದು ಗುರುತಿಸಲಾಗಿದೆ.

ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭ ಮನೆಯ ಹಿಂದಿನ ಚರಂಡಿಗೆ ಜಾರಿ ಬಿದ್ದು ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಮೃತ ರೊನಾಲ್ಡ್ ಅವಿವಾಹಿತರಾಗಿದ್ದರು. ಅವರ ತಾಯಿ, ಒಡಹುಟ್ಟಿದವರು ಮತ್ತು ಇತರ ಆಪ್ತ ಕುಟುಂಬ ಸದಸ್ಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *