Breaking
16 Jul 2026, Thu

ನಿದ್ದೆಯಲ್ಲಿದ್ದ ಕಾರ್ಮಿಕನ ಮೇಲೆ ಕತ್ತಿಯಿಂದ ಹಲ್ಲೆ: ಆರೋಪಿ ಬಂಧನ

ಉಡುಪಿ: ದುಷ್ಕರ್ಮಿಯೋರ್ವ ನಿದ್ದೆಯಲ್ಲಿದ್ದ ಕಾರ್ಮಿಕನ ಮೇಲೆ ನಡುರಾತ್ರಿ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದ ವ್ಯಕ್ತಿ ಕೂಲಿ ಕಾರ್ಮಿಕ ಕರಬಸಪ್ಪ (43) ಎಂದು ಗುರುತಿಸಲಾಗಿದೆ.
ಹಲ್ಲೆ ನಡೆಸಿದ ದುಷ್ಕರ್ಮಿ ಕಾರ್ಮಿಕ ಕುಮಾರ್ ಎಂದು ತಿಳಿದು ಬಂದಿದೆ.

ತಂದೆ ಮಗಳು ಮಲಗಿದ್ದ ಸಮಯಯದಲ್ಲಿ ನಡುರಾತ್ರಿ ಕತ್ತಿ ಹಿಡಿದು ಮನೆಯೊಳಗೆ ನುಗ್ಗಿದ ಆರೋಪಿ ಕುಮಾರ್, ಕರಬಸಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಎಚ್ಚರಗೊಂಡ ಮಗಳು ಬೊಬ್ಬೆ ಹಾಕಿದ ಪರಿಣಾಮ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಮಾಜ ಸೇವಕ ವಿಶು ಶೆಟ್ಟಿಯವರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ವಿಶು ಶೆಟ್ಟಿ ತನ್ನ ವಾಹನದಲ್ಲಿ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಕರಬಸಪ್ಪ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ವಿಶು ಶೆಟ್ಟಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆರೋಪಿ ಕುಮಾರನನ್ನು ಬಂಧಿಸಿ ಹಲ್ಲೆ ಮಾಡಿದ ಕತ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *