Breaking
16 Jul 2026, Thu

ಬೆಳ್ತಂಗಡಿ ತಾಲೂಕಿನ ಪಿಲ್ಯ ಗ್ರಾಮದಲ್ಲಿ ಚಿರತೆ ಸಂಚಾರ: ಆತಂಕದಲ್ಲಿ ಗ್ರಾಮಸ್ಥರು

ಬೆಳ್ತಂಗಡಿ: ತಾಲೂಕಿನ ಅಳದಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಲ್ಯ ಗ್ರಾಮದ ಉಲ್ಫೆ ಎಂಬಲ್ಲಿ ಚಿರತೆಯ ಸಂಚಾರ ಕಂಡು ಬಂದಿದೆ.

ಇಲ್ಲಿನ ಉಲ್ಫೆ ನಿವಾಸಿಯಾಗಿರುವ ಸತೀಶ್ ತಾಮನ್ಕರ್ ಮನೆಯ ಅಂಗಳದಲ್ಲಿ ಗುರುವಾರ ತಡರಾತ್ರಿ ಚಿರತೆ ಓಡಾಡಿದೆ.

ಸಾಕು ನಾಯಿಯನ್ನು ಹಿಡಿಯಲು ಚಿರತೆ ಬಂದಿದ್ದು, ಅದು ತಪ್ಪಿಸಿ ಕೊಂಡಾಗ ಮನೆಯ ಜಗಲಿಯವರೆಗೂ ಬಂದಿದೆ ಎಂದು ತಿಳಿದು ಬಂದಿದೆ.

ಈ ದೃಶ್ಯ ಮನೆಯ ಸಿಸಿ ಟಿವಿಯಲ್ಲಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಗ್ರಾಮದಲ್ಲಿ ಚಿರತೆ ಸಂಚಾರದಿಂದ ಜನರು ಭಯಭೀತರಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *