ವಿಟ್ಲದಲ್ಲಿ ಅತೀ ವೇಗದಿಂದ ಬಂದು ರಸ್ತೆ ಬದಿಯ ಹೊಂಡಕ್ಕೆ ವಾಲಿನಿಂತ ಸರಕಾರಿ ಬಸ್

ವಿಟ್ಲ: ಅತಿಯಾದ ವೇಗದಿಂದ ಸರಕಾರಿ ಬಸ್ಸೊಂದು ರಸ್ತೆ ಬದಿಯ ಹೊಂಡಕ್ಕೆ ವಾಲಿನಿಂತ ಘಟನೆ ವಿಟ್ಲದ ಬೈರಿಕಟ್ಟೆಯಲ್ಲಿ ಜೂ.12 ರಂದು ನಡೆದಿದೆ.

ವಿಟ್ಲ – ಉಪ್ಪಳ ನಡುವೆ ಸಂಚರಿಸುವ ಕೆಎಸ್ ಆರ್ ಟಿಸಿ ಬಸ್ ಇದಾಗಿದ್ದು ಅತೀ ವೇಗದಿಂದ ಪುತ್ತೂರಿನಿಂದ ಉಪ್ಪಳ ಕಡೆಗೆ ಸಾಗುತ್ತಿದ್ದಾಗ ಬೈರಿಕಟ್ಟೆಯ ಕೆಳಗಿನ ಕ್ರಾಸಿನಲ್ಲಿ ಮಾರ್ಗ ಬಿಟ್ಟು ಹೊಂಡಕ್ಕೆ ವಾಲಿನಿಂತಿದೆ.

ಅದೃಷ್ಟವಶಾತ್ ಬಸ್ ಪಲ್ಟಿಯಾಗಿಲ್ಲ. ಬಸ್ ನಲ್ಲಿದ್ದ ಪ್ರಯಾಣಿಕರು ಯಾವುದೇ ಜೀವ ಹಾನಿ ಇಲ್ಲದೆ ಅಪಾಯದಿದ ಪಾರಾಗಿದ್ದಾರೆ.

ಈ ಕುರಿತು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು ಕನ್ಯಾನ, ಮುಗುಳಿ ಬಾಯಾರು, ಉಪ್ಪಳಕ್ಕೆ ಹೋಗುವ ನೂರಾರು ಪ್ರಯಾಣಿಕರಿದ್ದರು.

ನಿತ್ಯವೂ ಹೀಗೆ ಬಸ್ ಚಾಲಕರ ಅತಿಯಾದ ವೇಗದಿಂದ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು ಭಯಭೀತರಾಗಿದ್ದಾರೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಬೇಜವಾಬ್ದಾರಿ ಚಾಲಕರ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *