Breaking
19 Sep 2026, Sat

ಉಳ್ಳಾಲದಲ್ಲಿ 12ನೇ ಮಹಡಿಯಿಂದ ಬಿದ್ದು ಬಾಲಕಿ ಸಾವು: ಕಾರಣ ನಿಗೂಢ

ಉಳ್ಳಾಲ: ಬಾಲಕಿಯೊಬ್ಬಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ಜೂ.12 ರ ತಡರಾತ್ರಿಯ ವೇಳೆ ನಡೆದಿದೆ.

ವೈದ್ಯರಾಗಿರುವ ಡಾ. ಮಮ್ತಾಝ್ ಅಹಮ್ಮದ್ ಎಂಬವರ ಪುತ್ರಿ ಹಿಬಾ(15) ಸಾವನ್ನಪ್ಪಿರುವ ಬಾಲಕಿಯಾಗಿದ್ದಾಳೆ.

ಇವರ ಕುಟುಂಬ ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ 12ನೇ ಮಹಡಿಯಲ್ಲಿ ವಾಸವಾಗಿದ್ದು, ತಡರಾತ್ರಿ ಏಕಾಏಕಿ ಬಾಲಕಿ ಹಿಬಾ ಮೇಲಿಂದ ಕೆಳಬಿದ್ದು ಸಾವನ್ನಪ್ಪಿದ್ದಾಳೆ ಅಂತ ಹೇಳಲಾಗುತ್ತಿದೆ.

ಹಿಬಾ ಯೆನೆಪೋಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಳು ಅನ್ನುವ ಮಾಹಿತಿ ಇದೆ.

ಉಳ್ಳಾಲ ಠಾಣಾ ಪೊಲೀಸ್ ಠಾಣೆಯಲ್ಲಿಈ ಬಗ್ಗೆ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *