Breaking
26 Mar 2026, Thu

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ದೇವಾಸ್ಥಾನಕ್ಕೆ 75 ಕೆ.ಜಿ ಗಂಟೆ ಅರ್ಪಣೆ

ಬೆಳ್ತಂಗಡಿ: ತಾಲೂಕಿನ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಪುತ್ತೂರಿನ ಉದ್ಯಮಿ ದಿನೇಶ್ ರೈ ಮೊಡಪ್ಪಾಡಿಮೂಲೆಯವರು 75 ಕೆ.ಜಿ.ಯ ಗಂಟೆಯನ್ನು ಅರ್ಪಿಸಿದ್ದಾರೆ.

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ಸೌತಡ್ಕ ಶ್ರೀ ಮಹಾಗಣಪತಿ‌ ದೇವಸ್ಥಾನಕ್ಕೆ ಗಂಟೆಯನ್ನು ಅರ್ಪಣೆ ಮಾಡಲಾಯಿತು.

ಈ ಸಂದರ್ಭ ದಿನೇಶ್ ರೈ ಅವರ ಪತ್ನಿ ರಾಧಿಕಾ ಡಿ. ರೈ, ಮಕ್ಕಳಾದ ಹರ್ಷಲ್ ಡಿ. ರೈ ಮತ್ತು ಜನ್ಯ ಡಿ. ರೈ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *