ಪಾಣೆಮಂಗಳೂರು: ಸಂಚಾರ ನಿಷೇಧ ಹೇರಿ ಹಾಕಲಾದ ಕಬ್ಬಿಣದ ತಡೆ ಮುರಿದ ಚಾಲಕ :ಪ್ರಕರಣ ದಾಖಲು

ಬಂಟ್ವಾಳ : ಪಾಣೆಮಂಗಳೂರು ಹಳೆ ಸೇತುವೆ ಮೇಲೆ ಸಂಚಾರ ನಿಷೇಧ ಹೇರಿ ಹಾಕಲಾದ ಕಬ್ಬಿಣದ ತಡೆಯನ್ನು ಮುರಿದು ಸರಕಾರಕ್ಕೆ ಸಾವಿರಾರು ರೂ ನಷ್ಟ ಉಂಟು ಮಾಡಿದ ವಾಹನ ಚಾಲಕನ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ಪುರಸಭೆ ಮುಖ್ಯಾಧಿಕಾರಿ ನಝೀರ್ ಅಹಮದ್ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸರು ದೂರು ದಾಖಲಿಸಿದ್ದಾರೆ .

ಬಂಟ್ವಾಳ ತಾಲೂಕು ಬಿ ಮೂಡಾ ಗ್ರಾಮದ ಹಳೇ ರಾಷ್ಟ್ರೀಯ ಹೆದ್ದಾರಿ ಎನ್. ಹೆಚ್. 48 ರ ಸೇತುವೆಯನ್ನು 2004-05 ರಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ನಿರ್ವಹಣೆ ಮತ್ತು ದುರಸ್ಥಿ ಬಗ್ಗೆ ಪುರಸಭೆಗೆ ಹಸ್ತಾಂತರಿಸಿರುತ್ತಾರೆ. ಇದು ಸ್ವಾತಂತ್ರ್ಯ ಪೂರ್ವ ಕಾಲದ ಸೇತುವೆಯಾಗಿದ್ದು, ಈ ಹಳೆಯ ಸೇತುವೆಯಲ್ಲಿ ಪ್ರಸ್ತುತ ಸರಕಾರ ಘನ ವಾಹನ ಸಂಚಾರವನ್ನು ನಿರ್ಬಂಧಿಸಿ ರಸ್ತೆಯ 2 ಬದಿಗಳಲ್ಲಿ ಕಬ್ಬಿಣದ ತಡೆಗಳನ್ನು ಹಾಕಿತ್ತು.

ಜೂನ್. 9 ರಂದು ಕೆಎ.19.ಎಇ.5621 ನೇ ವಾಹನದ ಚಾಲಕರು ಸೇತುವೆಯ ಧಾರಣ ಸಾಮರ್ಥ್ಯ ದ ಬಗ್ಗೆ ಆಳವಡಿಸಿದ ಕಬ್ಬಿಣದ ತಡೆಯನ್ನು ಮುರಿದು ಹಾಕಿ ಸರಕಾರಕ್ಕೆ ಸುಮಾರು ರೂ 80,000/- ದಷ್ಟು ನಷ್ಟವನ್ನು ಉಂಟು ಮಾಡಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಾಧಿಕಾರಿ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *