ದ.ಕ : ಭಾರತೀಯ ನೌಕಾ ಪಡೆಯ ಸಬ್ಲೆಫ್ಟಿನೆಂಟ್ ಹುದ್ದೆಗೆ ಮಂಗಳೂರಿನ ಅನನ್ಯಾ ರಾವ್ ನೇಮಕಗೊಂಡಿದ್ದಾರೆ.
ನಗರದ ಲ್ಯಾಂಡ್ ಲಿಂಕ್ಸ್ನಲ್ಲಿ ನೆಲೆಸಿರುವ ನಿವೃತ್ತ ಟೆಲಿಕಾಂ ಉದ್ಯೋಗಿ ಸತೀಶ್ ರಾವ್ ಮತ್ತು ವೀಣಾ ದಂಪತಿಯ ಪುತ್ರಿ ಅನನ್ಯಾ ರಾವ್.

ಎಲ್ಕೆಜಿಯಿಂದ ಎಸೆಸೆಲ್ಸಿವರೆಗೆ ಕಾವೂರು ಬಿಜಿಎಸ್ನಲ್ಲಿ ವಿದ್ಯಾಭ್ಯಾಸ, ಚೈತನ್ಯ ಕಾಲೇಜಿನಲ್ಲಿ ಪಿಯುಸಿ, ಸುರತ್ಕಲ್ ಎನ್ಐಟಿಕೆಯಲ್ಲಿ ಮೆಕ್ಯಾನಿಕಲ್ ವಿಭಾಗದಲ್ಲಿ ಬಿಟೆಕ್ ಪದವಿ ಪಡೆದ ಅವರು ಬಾಲ್ಯದಿಂದ ದೇಶ ಸೇವೆಯಲ್ಲಿ ಅಭಿರುಚಿ ಹೊಂದಿದ್ದರು.
ಅವರು ಮೇ 31ರಂದು ಇಂಡಿಯನ್ ನೇವಲ್ ಅಕಾಡೆಮಿ ಎಝಿಮಾಲದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ನಲ್ಲಿ ಕಮೀಷನ್ಡ್ ಅಧಿಕಾರಿ ಆಗಿ ಹೊರಹೊಮ್ಮಿದ್ದರು.

ಭಾರತೀಯ ಸೇನೆ ಸೇರಬೇಕೆಂಬ ಕನಸನ್ನು ಕಂಡಿದ್ದ ಅನನ್ಯಾ ರಾವ್, ಅದಕ್ಕಾಗಿ ಕಾಲೇಜ್ನಲ್ಲಿ ಎನ್ಸಿಸಿ ತರಬೇತಿ ಪಡೆದಿದ್ದರು.
ಎಂಜಿನಿಯರಿಂಗ್ ಪದವಿ ಪಡೆದ ಬಳಿಕ ಸೇನಾ ನೇಮಕಾತಿ ಪರೀಕ್ಷೆಯ ಮೂಲಕ ಆಯ್ಕೆಗೊಂಡು 10 ತಿಂಗಳ ತರಬೇತಿ ಪಡೆದು ಇತ್ತೀಚೆಗೆ ಸಬ್ಲೆಫ್ಟಿನೆಂಟ್ ಆಗಿ ಆಯ್ಕೆಗೊಂಡಿದ್ದಾರೆ.


