ಮಂಗಳೂರು: ಮನೆಯಲ್ಲಿ ಪೂಜೆ ಮಾಡುತ್ತಿದ್ದ ವೇಳೆ ಉಟ್ಟ ಬಟ್ಟೆಗೆ ಬೆಂಕಿ ತಗುಲಿ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟ ಘಟನೆ ಮೇರಿಹಿಲ್ ನಲ್ಲಿ ನಡೆದಿದೆ.
ಗುರುನಗರದ ಸರೋಜಿನಿ (64) ಎಂಬವರು ಮಂಗಳವಾರ ರಾತ್ರಿ ಆರಾಧನೆ ಮಾಡುತ್ತಿದ್ದ ವೇಳೆ ಬಟ್ಟೆಗೆ ಬೆಂಕಿ ತಗಲಿದ್ದು ಈ ವೇಳೆ ಅವರ ಪುತ್ರ ರಕ್ಷಿಸಲು ಮುಂದಾಗಿದ್ದಾನೆ. ನಂತರ ವಿಷಯ ತಿಳಿದ ನೆರೆಹೊರೆಯವರು ಮನೆಗೆ ಧಾವಿಸಿ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವೆರು ಮೃತಪಟ್ಟಿದ್ದಾರೆ.

ಮಹಿಳೆಯ ಪುತ್ರ ಅಕ್ಷಯ್(೨೦ವ) ಗಾಯಗೊಂಡಿದ್ದಾರೆ.
ಈ ಕುರಿತು ಕಂಕನಾಡಿ ನಗರದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



