Breaking
13 May 2026, Wed

ಬಂಟ್ವಾಳ: ಮಕ್ಕಳನ್ನು ರಸ್ತೆ ದಾಟಿಸಿ ಹಿಂದಿರುವಾಗ ಕೆ ಎಸ್‌ ಆರ್‌ ಟಿ ಸಿ ಬಸ್ ಡಿಕ್ಕಿ : ಆಟೋ ಚಾಲಕ ಮೃತ್ಯು

ಬಂಟ್ವಾಳ: ಆಟೋಗೆ ಕೆಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದು ಆಟೋ ಚಾಲಕ ಮೃತಪಟ್ಟ ಘಟನೆ ಹತ್ತನೇ ಮೈಲ್‌ಕಲ್ಲುನಲ್ಲಿ ಇಂದು (ಜೂ.06) ನಡೆದಿದೆ.

ಮೃತಪಟ್ಟ ಯುವಕ ಅಮೆಮ್ಮಾರ್ ನಿವಾಸಿ ಪ್ರಸ್ತುತ ಹತ್ತನೇ ಮೈಲ್ ಕಲ್ಲು ಫ್ಲಾಟ್ ನಲ್ಲಿರುವ ಝಾಹಿದ್ (28) ಎಂದು ಗುರುತಿಸಲಾಗಿದೆ.

ರಸ್ತೆ ದಾಟಲು ಹೆದರುತ್ತಿದ್ದ ಮಕ್ಕಳನ್ನು ರಸ್ತೆ ದಾಟಿಸಿ ಹಿಂದಿರುಗುವವಷ್ಟರಲ್ಲಿ ಮಂಗಳೂರಿನಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತಪಟ್ಟ ಯುವಕ ತಾಯಿ ಹಾಗೂ ಮೂರು ಸಹೋದರರು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *