ಕಡಬ: ದ್ವೇಷ ಭಾಷಣ ಮಾಡಿದ ಆರೋಪದಲ್ಲಿ ಹಿಂದೂ ಸಂಘಟನೆಯ ಮುಖಂಡರೊಬ್ಬರು ಕಡಬ ಠಾಣೆಯಲ್ಲಿ ಜೂ. 4 ರಂದು ಪ್ರಕರಣ ದಾಖಲಾಗಿದೆ.

ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿಯಾಗಿರುವ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನವೀನ್ ಎಂಬವರ ವಿರುದ್ದ ದೂರು ದಾಖಲಾಗಿದೆ.
ನವೀನ್ ನೆರಿಯ ಅವರು ತಮ್ಮ ಭಾಷಣದಲ್ಲಿ “ನೀವು ಪೊಲೀಸರು ರಾತ್ರಿ ಸಮಯ ಹಿಂದೂ ಮುಖಂಡರ ಮನೆಗೆ ಮಾತ್ರ ಹೋಗಿ ಪ್ರಮುಖರನ್ನು ಚೆಕ್ ಮಾಡಿ ಹಿಂದೂ ಧರ್ಮದ ಮುಖಂಡರಿಗೆ ಮಾತ್ರ ತೊಂದರೆಯನ್ನು ನೀಡುತ್ತಿದ್ದೀರಿ” ಎಂದು ದ್ವೇಷದ ಭಾಷಣವನ್ನು ಮಾಡಿ ಅಲ್ಲಿ ಸೇರಿದ್ದ ಸಾರ್ವಜನಿಕರಿಗೆ ಅನ್ಯಧರ್ಮದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಮಾಡಿದ್ದಾರೆ.

ಆದುದರಿಂದ ಸಾರ್ವಜನಿಕ ಸ್ಥಳದಲ್ಲಿ ಅನ್ಯಧರ್ಮದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಮಾತನಾಡಿದ ನವೀನ್ ನೆರಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ದಾಖಲಾಗಿದೆ.
ಠಾಣಾ ಎಸ್.ಐ. ಅವರ ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಂದು ತಿಳಿದು ಬಂದಿದೆ.


