Breaking
24 Mar 2026, Tue

ಮಂಗಳೂರು: ಟಿಂಟ್ ಗ್ಲಾಸ್ ಅಳವಡಿಸಿದ ಕಾರುಗಳ ವಿರುದ್ಧ ಪೊಲೀಸರ ಕಾರ್ಯಾಚರಣೆ; ಕಾರು ಮಾಲಕರ ಮೇಲೆ ದಂಡ

ಮಂಗಳೂರು: ಟಿಂಟ್ ಗ್ಲಾಸ್ ಅಳವಡಿಸಿದ ಕಾರುಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು ಎರಡು ದಿನಗಳಲ್ಲಿ ಒಟ್ಟು 223 ಪ್ರಕರಣ ದಾಖಲಿಸಿ ರೂ. 1,11,500 ದಂಡವನ್ನು ವಸೂಲಿ ಮಾಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಜೂ.2 ಮತ್ತು ಜೂ.3 ರಂದು ಕಾರುಗಳಲ್ಲಿ ಟಿಂಟೆಡ್ ಗ್ಲಾಸ್‌ಗಳ ಅಳವಡಿಸಿ ಸಂಚರಿಸುತ್ತಿದ್ದ ವಾಹನ ಮಾಲಕರ/ಚಾಲಕರ ಮೇಲೆ ಪ್ರಕರಣ ದಾಖಲಿಸಿದೆ. ಅಲ್ಲದೇ ಟಿಂಟೆಡ್ ಗ್ಲಾಸ್ ಹಾಗೂ ಬ್ಲಾಕ್ ಫಿಲ್ಮಂ ಸ್ಟಿಕರ್‌ಗಳನ್ನು ವಾಹನ ಚಾಲಕರಿಂದ ತೆಗೆಸಲಾಗಿದೆ.
ಅಪರಾಧಗಳನ್ನು ತಡೆಗಟ್ಟಲು ಮೋಟಾರು ವಾಹನ ಕಾಯ್ದೆಯಡಿ ಕಾರುಗಳಿಗೆ ಟಿಂಟ್‌ ಗ್ಲಾಸ್‌ ಅಳವಡಿಸಬಾರದೆಂಬ ನಿಯಮವಿರುವ ಹಿನ್ನಲೆ ಸಂಚಾರ ನಿಯಮ ಉಲ್ಲಂಘಿಸಿರುವ ವಾಹನಗಳ ವಿರುದ್ಧ ಪೊಲೀಸರು ವಿಶೇಷ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ವಾಹನಗಳಿಗೆ ಟಿಂಟ್‌ಗಳನ್ನು ಅಳವಡಿಸದಂತೆ ಅಂಗಡಿಗಳ ಮಾಲಕರಿಗೆ ಸೂಚನೆ
ಜೂ. 3 ರಂದು ಪೊಲೀಸ್ ಆಯುಕ್ತಕರ ಕಚೇರಿ ಸಭಾಂಗಣದಲ್ಲಿ ಮಂಗಳೂರು ನಗರ ಕಮಿಷನರೇಟ್ ಹಾಗೂ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಯನಿರ್ವಹಿಸುವ ಕಾರು ಶೋ ರೂಮ್, ಆಕ್ಸೆಸರಿಸ್ ಅಂಗಡಿ, ಗ್ಯಾರೇಜ್‌, ಸ್ಟಿಕರ್ ಅಂಗಡಿಗಳ ಮಾಲಕರಿಗಾಗಿ ಸಭೆ ಆಯೋಜಿಸಿ, ಸುಪ್ರೀಂಕೋರ್ಟ್‌ ಆದೇಶದ ಬಗ್ಗೆ ಮನವರಿಕೆ ಮಾಡಿ ಗ್ರಾಹಕರು ವಾಹನಗಳ ಗಾಜುಗಳಿಗೆ ಹೆಚ್ಚುವರಿ ಟಿಂಟ್‌ಗಳ ಅಳವಡಿಸದಂತೆ ಅಂಗಡಿ ಮಾಲಕರು ಸೂಚಿಸಬೇಕಾಗಿ ಸಲಹೆ ನೀಡಿದರು.
ವಾಹನಗಳ ಮೇಲಿನ ವಿಶೇಷ ಕಾರ್ಯಾಚರಣೆ ಮುಂದಿನ ದಿನಗಳಲ್ಲಿ ಮುಂದುವರಿಯಲಿದೆ ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *