Breaking
23 Mar 2026, Mon

‘ತಾಕತ್ತಿದ್ರೆ ಗಡಿಪಾರು ಮಾಡಿ ನೋಡಿ, ಎಂದು ಸೆಲ್ಫಿ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ ಯುವಕ: ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಸೇರಿ 36 ಜನರ ವಿರುದ್ಧ ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಚರ್ಚೆಗಳು ಶುರುವಾಗಿದೆ.

ಸದ್ಯ ಇದೇ ವಿಚಾರಕ್ಕೆ ಯುವಕನೊಬ್ಬ ಸೆಲ್ಫಿ ವಿಡಿಯೋ ಮಾಡಿ ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಯುವಕ ‘ತಾಕತ್ತಿದ್ರೆ ಗಡಿಪಾರು ಮಾಡಿ ನೋಡಿ, ಒಮ್ಮೆ ಪುತ್ತಿಲರ ವಿಷಯಕ್ಕೆ ಬನ್ನಿ ನೋಡೊಣ’. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳು ಸತ್ತಿದ್ದಾರಾ…? ಬದುಕಿದ್ದಾರಾ ನೊಡೋಣ…?

ಯಾವ ಕಾರಣಕ್ಕೆ ಗಡಿಪಾರು ಮಾಡುತ್ತಿದ್ದೀರ ಹೇಳಿ. ಹಿಂದೂ ಸಮಾಜ ಯಾವ ಅನ್ಯಾಯ ಮಾಡಿದೆ ಹೇಳಿ, ಅಮೇಲೆ ನೋಟೀಸ್ ಕೊಡಿ. ನಾವು ಬಿಡೋ ಪ್ರಶ್ನೆಯೇ ಇಲ್ಲ. ಇನ್ನು ಮುಂದೆ ಕೂಡ 24 ಗಂಟೆಗಳ ಕಾಲ ಹಿಂದುತ್ವಕ್ಕೆ ದುಡಿಯುತ್ತೇವೆ.

ನಿಮ್ಮ ತಾಕತ್ತನ್ನು ಒಳ್ಳೆಯದಕ್ಕೆ ತೋರಿಸಿ. ಕರಾವಳಿಯ ಕೋಮುಗಲಭೆ ನಿಲ್ಲಿಸಲು ಅದನ್ನು ಬಳಸಿ ಎಂದು ಸರ್ಕಾರ ಮತ್ತು ಪೊಲೀಸರಿಗೆ ಸವಾಲು ಹಾಕಿದ್ದಾನೆ.

ಯುವಕನ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿದೆ.

Leave a Reply

Your email address will not be published. Required fields are marked *