Breaking
23 Mar 2026, Mon

ಮಂಗಳೂರಿನ ಬ್ಯಾಂಕ್ ವೊಂದರಲ್ಲಿ ಶಾರ್ಟ್ ಸರ್ಕ್ಯೂಟ್ : ಕಂಪ್ಯೂಟರ್ ಸಹಿತ ವಿವಿಧ ಉಪಕರಣಗಳಿಗೆ ಹಾನಿ,ನಷ್ಟ

ಮಂಗಳೂರು: ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಂಪ್ಯೂಟರ್ ಸಹಿತ ವಿವಿಧ ಉಪಕರಣಗಳಿಗೆ ಹಾನಿಯಾಗಿರುವ ಘಟನೆ ಮಂಗಳೂರು ನಗರದ ಬ್ಯಾಂಕ್ ವೊಂದರಲ್ಲಿ ಜೂನ್. 3ರಂದು ನಡೆದಿದೆ.

ನಗರದ ರಥಬೀದಿಯಲ್ಲಿರುವ ಬ್ಯಾಂಕ್ ಶಾಖೆಯೊಂದರ ಮೊದಲ ಮಹಡಿಯಲ್ಲಿರುವ ಹೆಲ್ಪ್ ಡೆಸ್ಕ್ ವಿಭಾಗದ ಬಳಿ ಮಧ್ಯಾಹ್ನದ ವೇಳೆ ಈ ಅವಘಡ ಸಂಭವಿಸಿದೆ.

ಎಸಿ ಕೊಠಡಿಯಾಗಿರುವ ಕಾರಣ ಹೊಗೆ ಹೊರ ಹೋಗಲು ವ್ಯವಸ್ಥೆ ಇಲ್ಲದೆ ಬ್ಯಾಂಕ್ ನ ಕೊಠಡಿಯೊಳಗೆ ದಟ್ಟ ಹೊಗೆ ಶೇಖರಣೆಯಾಗಿತ್ತು.

ಘಟನೆಯ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪಾಂಡೇಶ್ವರ ಅಗ್ನಿಶಾಮಕ ಸಿಬಂದಿಗಳು ಫ್ಯಾನ್ ಬಳಸಿ ಹೊಗೆ ಹೊರ ಹೋಗಲು ವ್ಯವಸ್ಥೆ ಮಾಡಿಕೊಟ್ಟು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬ್ಯಾಂಕ್ ನಲ್ಲಿದ್ದ ಕಂಪ್ಯೂಟರ್ ಸಹಿತ ವಿವಿಧ ಉಪಕರಣಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *