Breaking
23 Mar 2026, Mon

ಮೈಕಾಲ ಟ್ರೋಲ್ಸ್ ಪೇಜ್ ಸೇರಿದಂತೆ ಹಲವು ಇನ್ಸ್ಟಾಗ್ರಾಂ ಪೇಜ್ ವಿರುದ್ಧ ಎಫ್ಐಆರ್

ಮಂಗಳೂರು: ಕೋಮುದ್ವೇಷ ಉಂಟು ಮಾಡುವ ಆರೋಪದ ಮೇಲೆ ಕೆಲವು ಇನ್ಸ್ಟಾಗ್ರಾಂ ಟ್ರೋಲ್ ಪೇಜ್ವೊಂದರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಇನ್ ಸ್ಟಾಗ್ರಾಂನ “ಮೈಕಾಲ ಟ್ರೋಲ್ಸ್” ಎಂಬ ಹೆಸರಿನ ಖಾತೆಯಲ್ಲಿ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದ ಯುವಕನ ಕೊಲೆಗೆ ಸಂಬಂಧಿಸಿದಂತೆ ಕೋಮುದ್ವೇಶವನ್ನುಂಟು ಮಾಡುವಂತಹ ಆಕ್ಷೇಪಾರ್ಹ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು.

ಇದರಿಂದಾಗಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗುವ ಸಾಧ್ಯತೆಗಳಿರುವುದರಿಂದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಲೆಗೀಡಾದ ಯುವಕನ ಜೊತೆಗೆ ತನ್ನ ಫೋಟೋ ತೆಗೆದಿದ್ದು, ಅದನ್ನು ಅವರು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದ್ದರು.

ಈ ಫೋಟೋವನ್ನು ದುರುಪಯೋಗಪಡಿಸಿಕೊಂಡು ಟ್ರೋಲ್ ಅಬ್ರಹಾಂ, ಮತ್ತು “ಮೈಕಾಲ ಟ್ರೋಲ್ಸ್ ಹಾಗೂ ” ಕರಾವಳಿ ಒಫಿಸಿಯಲ್ ” ಎಂಬ ಇನ್ಸ್ಟಾಗ್ರಾಂ ಪೇಜ್ಗಳಲ್ಲಿ ಯಾರೋ ಕಿಡಿಗೇಡಿಗಳು ದೂರುದಾರರ ಮೇಲೆ ಕೋಮುದ್ವೇಷ ಭಾವನೆ ಉಂಟು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಬಂಟ್ವಾಳದ ಕುರಿಯಾಳ ಗ್ರಾಮದ ಧನುಷ್ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *