Breaking
23 Mar 2026, Mon

ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್ ಪೂಜಾರಿ ಮನೆಗೆ ಡಿವೈನ್ ಸ್ವಾರ್ ರಿಷಬ್ ಶೆಟ್ಟಿ ದಂಪತಿ ಭೇಟಿ, ಸಾಂತ್ವನ

ಉಡುಪಿ: ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮತ್ತು ಕಿರುತೆರೆ ನಟ ರಾಕೇಶ್ ಪೂಜಾರಿಯವರ ನಿವಾಸಕ್ಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ದಂಪತಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.

ರಾಕೇಶ್ ಅವರು ನಿಧನರಾಗಿ ಬರೋಬ್ಬರಿ 22 ದಿನಗಳು ಕಳೆದಿದ್ದು, ಉಡುಪಿಯ ಹೊಡೆಯಲ್ಲಿರುವ ಅವರ ಮನೆಗೆ ತೆರಳಿದ ರಿಷಬ್ ಶೆಟ್ಟಿ ದಂಪತಿ ಸಹೋದರಿ ಹಾಗೂ ತಾಯಿಯನ್ನು ಭೇಟಿ ಮಾಡಿದ್ದಾರೆ.

ಈ ವೇಳೆ ರಾಕೇಶ್ ತಂಗಿ ಮತ್ತು ತಾಯಿಗೆ ಸಾಂತ್ವನ ಹೇಳಿದರ ಡಿವೈನ್ ಸ್ಟಾರ್ ಅವರು ಅವರ ಜತೆ ನಿಲ್ಲುವುದಾಗಿ ಹೇಳಿದ್ದಾರೆ. ರಾಕೇಶ್ ತಂಗಿ ಮದುವೆಗೆ ಆರ್ಥಿಕ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಮುಂದಿನ ದಿನದಲ್ಲಿ ನಿರ್ಮಾಣವಾಗುವ ರಾಕೇಶ್ನ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿ ಸದಾಕಾಲ ಕುಟುಂಬದೊಂದಿಗೆ ನಾನಿದ್ದೇನೆ ಎನ್ನುವ ಭರವಸೆಯನ್ನೂ ರಿಷಬ್ ಶೆಟ್ಟಿ ನೀಡಿದ್ದಾರೆ ಅನ್ನುವ ಮಾಹಿತಿ ಇದೆ.

ಮೇ.12 ರಂದು ಆಪ್ತರ ಮೆಹಂದಿ ಕಾರ್ಯಕ್ರಮಕ್ಕೆ ತೆರಳಿದ್ದಾಗ ರಾಕೇಶ್ ಪೂಜಾರಿಗೆ ಹೃದಯಾಘಾತ ಸಂಭವಿಸಿ ನಿಧನ ಹೊಂದಿದ್ದರು. ‘ಕಾಮಿಡಿ ಕಿಲಾಡಿಗಳು’ ಶೋ ಸೇರಿದಂತೆ ಹಲವು ಸಿನಿಮಾ ಮತ್ತು ರಿಯಾಲಿಟಿ ಶೋನಲ್ಲಿ ಅವರು ಕಾಣಿಸಿಕೊಂಡು ಹೆಸರು ಸಂಪಾದನೆ ಮಾಡಿದ್ದರು ರಾಕೇಶ್.

Leave a Reply

Your email address will not be published. Required fields are marked *