ಉಜಿರೆ: ಅನುಗ್ರಹ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಶಾಲಾ ಪ್ರಾರಂಭೋತ್ಸವವು ಶಾಲೆಯ ಸಭಾಭವನದಲ್ಲಿ ಜೂನ್.2 ರಂದು ಬಹಳ ವಿಜೃಂಭಣೆಯಿಂದ ನಡೆಯಿತು.
ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂ. ಫಾ ಅಬೆಲ್ ಲೋಬೊ, ಪ್ರಾಂಶುಪಾಲರಾದ ವಂ. ಫಾ ವಿಜಯ್ ಲೋಬೋ ಇವರು ಮಕ್ಕಳ ಜೊತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಶಾಲಾ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಪ್ರಾಂಶುಪಾಲರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಶಾಲೆಯಲ್ಲಿ ಮಕ್ಕಳು ಪಾಲಿಸಲೇಬೇಕಾದ ನಿಯಮಗಳ ಬಗ್ಗೆ ತಿಳಿಸಿ ಹೇಳಿದರು.
ನಂತರ ಹೊಸ ಶಿಕ್ಷಕ ಶಿಕ್ಷಕಿಯರನ್ನು ಹಾಗೂ ಶಾಲೆಯ ವಿವಿಧ ತರಗತಿಗಳಿಗೆ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳನ್ನು ಸ್ವಾಗತಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿಕೊಂಡ ಸಂಚಾಲಕರಾದ ವಂ. ಫಾ ಅಬೆಲ್ ಲೋಬೊ ಅವರು ಮೌಲ್ಯಾಧಾರಿತ ಹಾಗೂ ಶಿಸ್ತುಬದ್ಧ ಜೀವನವನ್ನು ಅಳವಡಿಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳುತ್ತಾ ಶಾಲಾ ಕಾರ್ಯ ಚಟುವಟಿಕೆಗಳಿಗೆ ಶುಭ ಕೋರಿದರು.

ಸಹ ಶಿಕ್ಷಕಿ ಶ್ರೀಮತಿ ಐರಿನ್ರೋಡ್ರಿಗಸ್ ಕಾರ್ಯಕ್ರಮ ನಿರೂಪಿಸಿ, ಸಹಶಿಕ್ಷಕ ಶ್ರೀ ರವಿಕುಮಾರ್ ಸ್ವಾಗತಿಸಿ, ಸಹ ಶಿಕ್ಷಕಿ ಶ್ರೀಮತಿ ಅರ್ಪಿತ ವಂದಿಸಿದರು. ಬಳಿಕ ಮಕ್ಕಳಿಗೆ ಸಿಹಿ ಹಂಚಲಾಯಿತು.
