ಬಂಟ್ವಾಳ: ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿದ್ದ ಫೋಟೋವನ್ನು ಯಾರೋ ಕಿಡಿಗೇಡಿಗಳು ದುರ್ಬಳಕೆ ಮಾಡಿ ಟ್ರೋಲ್ ಪೇಜ್ ಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ಆರೋಪಿಸಿ ಯುವಕನೋರ್ವ ಬಂಟ್ವಾಳ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೊಲೆಯಾದ ಯುವಕನ ಜತೆ ತಾನು ನಿಂತಿದ್ದ ಫೊಟೋವನ್ನು ಕಿಡಿಗೇಡಿಗಳು ದುರ್ಬಳಕೆ ಮಾಡಿ ಟ್ರೋಲ್ ಅಬ್ರಾಹಂ, ಮೈಕಾಲ ಟ್ರೋಲ್ ಹಾಗೂ ಕರಾವಳಿ ಅಫೀಶಿಯಲ್ ಪೇಜ್‌ಗಳಲ್ಲಿ ಹಾಕಿದ್ದಾರೆ. ನನ್ನ ಮೇಲೆ ಕೋಮುಭಾವನೆ ಕೆರಳುವ ರೀತಿ ಹಾಗೂ ಕೊಲೆ ಅಪರಾಧಿಯಂತೆ ಬರಹಗಳನ್ನು ಹಾಕಿ ಪೋಸ್ಟ್ ಮಾಡಿರುತ್ತಾರೆ ಎಂದು ಕೂರಿಯಾಳ ಗ್ರಾಮದ ನಿವಾಸಿ ಧನುಷ್ ಅವರು ನೀಡಿದ ದೂರಿನಲ್ಲಿ ತಿಳಿಸಿದ್ಧಾರೆ.
ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

