ಕಾವೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧನೂಪೂಜೆ ಶೌರ್ಯ ಘಟಕದ ಸದಸ್ಯರು ಜುಲೈ 20 ರಂದು ಧನೂಪೂಜೆ ಲಕ್ಷ್ಮೀ ನಾರಾಯಣ ಕಾವೇಶ್ವರ ದೇವಸ್ಥಾನದ ರಸ್ತೆ ಬದಿಯಲ್ಲಿ ಅನಗತ್ಯವಾಗಿ ಬೆಳೆದ ಗಿಡಮರಗಳನ್ನು ಕಡಿದು ರಸ್ತೆಬದಿ ಸ್ವಚ್ಚತಾ ಕಾರ್ಯ ನಡೆಸಿದರು.

ಈ ಸಂದರ್ಭ ಘಟಕ ಪ್ರತಿನಿಧಿ ಜಗದೀಶ್ ಆಚಾರ್ಯ, ಸಂಯೋಜಕಿ ಅಮಿತಾ.ಬಿ, ಸದಸ್ಯರಾದ ಗಣೇಶ್ ಆಚಾರ್ಯ, ಪ್ರಮೋದ್ ಆಚಾರ್ಯ, ದಿನೇಶ್ ಆಚಾರ್ಯ, ಕೇಶವ ಆಚಾರ್ಯ, ಭಾರತಿ ಕಮ್ಮಾಜೆ, ಪ್ರೇಮ ಗರ್ಗಲ್, ಪ್ರಶಾಂತ್ ಧನೂಪೂಜೆ ಭಾಗವಹಿಸಿದ್ದರು.

ಈ ವೇಳೆ ಘಟಕದ ಸದಸ್ಯರಿಗೆ ತಂಪು ಪಾನೀಯ ಮತ್ತು ತಿಂಡಿಯ ವ್ಯವಸ್ಥೆಯನ್ನು ಒಕ್ಕೂಟದ ಉಪಾಧ್ಯಕ್ಷರಾದ ನಳಿನಿ, ಸ್ಥಳೀಯ ನಿವಾಸಿಯಾದ ಉಮೇಶ್ ಭಗವತಿ ಸ್ಟೋರ್, ಪಶು ವೈದ್ಯರಾದ ಸುರೇಶ್, ಘಟಕದ ಸಂಯೋಜಕಿಯವರು ಮಾಡಿದರು.




