Breaking
25 Jul 2026, Sat

ಉಪ್ಪಳ ಗೇಟ್ ಬಳಿ ಅಪಘಾತ: ಮಹಿಳೆ ಸಾವು, ಇಬ್ಬರು ಗಂಭೀರ

ಮಂಜೇಶ್ವರ: ಮೀನಿನ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮಹಿಳೆಯೊಬ್ಬರು ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಮಂಜೇಶ್ವರದ ಉಪ್ಪಳ ಗೇಟ್ ಬಳಿ ಮೇ.31 ರ ಸಂಜೆ ವೇಳೆ ನಡೆದಿದೆ.

ವರ್ಕಾಡಿ ಸಮೀಪದ ಕೋಳ್ಯೂರು ಪದವು ನಿವಾಸಿ ಮಹಿಳೆ ನವ್ಯ (24) ಮೃತಪಟ್ಟಿದ್ದಾರೆ.

ನವ್ಯ ಪತಿ ಪದ್ಮನಾಭ (36) ಹಾಗೂ ಮಗು ಗಾಯನ್ (2)ಗಂಭೀರ ಗಾಯಗೊಂಡಿದ್ದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನವ್ಯಾ ಅವರು ಔಷಧಿ ಗೆಂದು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *