Breaking
25 Jul 2026, Sat

ಉಳ್ಳಾಲ: ನೆರೆ ನೀರಲ್ಲಿ ಕೊಚ್ಚಿ ಹೋದ 68 ಆಡು, ಕುರಿಗಳು ಸಾವು

ಉಳ್ಳಾಲ : ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನೆರೆ ಸೃಷ್ಟಿಯಾಗಿ 68 ಆಡು, ಕುರಿಗಳು ಸಾವನ್ನಪ್ಪಿದ ಘಟನೆ ತಲಪಾಡಿ ಸಮೀಪದ ಕೆಸಿ ರೋಡ್ ಎಂಬಲ್ಲಿ ಸಂಭವಿಸಿದೆ.

ಮಟನ್ ಯಾಕೂಬ್ ಎಂಬವರಿಗೆ ಸೇರಿದ ಸುಮಾರು 68 ಆಡು, ಕುರಿಗಳು ಶೆಡ್ಡಿನೊಳಗಿದ್ದ ವೇಳೆ ನೆರೆನೀರು ನುಗ್ಗಿದ್ದು, ಆಡು, ಕುರಿಗಳೆಲ್ಲವೂ ನೀರಿನಲ್ಲಿ ಕೊಚ್ಚಿಹೋಗಿದೆ. ಇದರಲ್ಲಿ ಸುಮಾರು 23 ಆಡು, ಕುರಿಗಳ ಶವ ಪತ್ತೆಯಾಗಿದ್ದು, ಉಳಿದವುಗಳು ಕಾಣೆಯಾಗಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *