Breaking
19 Sep 2026, Sat

ಪುತ್ತೂರಿನ ಬೆಳ್ಳಿಪ್ಪಾಡಿಯಲ್ಲಿ ಭೀಕರ ಭೂ ಕುಸಿತ: ರಸ್ತೆಗೆ ಧರೆ ಕುಸಿದು ಸಂಪರ್ಕ ಕಡಿತ

ಪುತ್ತೂರು: ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದಲ್ಲಿ ಮೇ.30 ರ ರಾತ್ರಿ ಭೀಕರ ಭೂಕುಸಿತ ಉಂಟಾಗಿದೆ.

ಪರಿಣಾಮ ಬೆಳ್ಳಿಪ್ಪಾಡಿಯ ಸಕಲೇಶ್ವರ ದೇವಸ್ಥಾನದ ಬಳಿಯ ಗುತ್ತಿನಮನೆ ಎಂಬಲ್ಲಿ ರಸ್ತೆಗೆ ಧರೆ ಕುಸಿದುಬಿದ್ದು ಸಂಪರ್ಕ ಕಡಿತವಾಗಿದ್ದು, ಮಣ್ಣು ಕೆಳಗಿನ ತೋಟಗಳಿಗೂ ನುಗ್ಗಿದೆ ಎಂದು ತಿಳಿದು ಬಂದಿದೆ. ಕಳೆದ ಎರಡು ವರ್ಷಗಳ ಹಿಂದೆಯೂ ಇದೆ ಸ್ಥಳದಲ್ಲಿ ಭೂಕುಸಿತ ಸಂಭವಿಸಿತ್ತು.

ಮೇಲ್ಭಾಗದಲ್ಲಿ ಇರುವ ಎರಡು ಮನೆಗಳು ಅಪಾಯಕಾರಿ ಸ್ಥಿತಿಯನ್ನು ಎದುರಿಸುತ್ತಿವೆ. ಈ ರಸ್ತೆಯಿಂದಾಗಿ ಸಂಚರಿಸುವ ವಾಹನ ಸವಾರರು ಬದಲಿ ರಸ್ತೆಯನ್ನು ಉಪಯೋಗಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

ಈ ಬಗ್ಗೆ ಇಲಾಖೆ ತಕ್ಷಣ ಎಚ್ಚೆತ್ತುಕೊಂಡು ಸೂಕ್ತ ಎಚ್ಚರಿಕೆ ಕ್ರಮ ಕೈಗೊಳ್ಳುವಂತೆ ಜನ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *