Breaking
25 Jul 2026, Sat

ಬೆಳ್ಳಂ ಬೆಳಗ್ಗೆ ಕಾರ್ಕಳದಲ್ಲಿ ಮೆಸ್ಕಾಂ ಅಕೌಂಟೆಂಟ್ ಆಫೀಸರ್ ನ ಮನೆ,ಲಾರ್ಡ್ಜ್ , ಮೆಸ್ಕಾಂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಕಾರ್ಕಳ : ಕಾರ್ಕಳ ಮೆಸ್ಕಾಂ ಅಕೌಂಟೆಂಟ್ ಆಫೀಸರ್ ಗಿರೀಶ್ ರಾವ್ ಅವರ ಮನೆ,ಮೆಸ್ಕಾಂ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದಾರೆ.

ಕಾರ್ಕಳ ಪೇಟೆಯ ಬೈಪಾಸ್ ನಲ್ಲಿರುವ ಅವರ ಮಾಲಕತ್ವದ ಕಾರ್ಕಳ ಇನ್ ಲಾರ್ಡ್ಜ್ ಮತ್ತು ಬೈಪಾಸ್ ನವೋದಯ ಸರ್ಕಲ್ ಬಳಿಯಿರುವ ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಲಾಗಿದೆ.

ಲೋಕಾಯುಕ್ತ ಎಸ್. ಪಿ. ಕುಮಾರಚಂದ್ರ ನೇತೃತ್ವದಲ್ಲಿ 5 ತಂಡ ಮುಂಜಾನೆ 5.30ಕ್ಕೆ ದಾಳಿ ನಡೆದಿದ್ದು ಆಸ್ತಿ, ಇತರೆ ದಾಖಲೆಗಳ ಪರಿಶೀಲನೆಯನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *