Breaking
23 Jul 2026, Thu

ಉಡುಪಿ: ಮನೆಯಲ್ಲಿ ನೇಣು ಬಿಗಿದು ರಿಕ್ಷಾಚಾಲಕ ಆತ್ಮಹತ್ಯೆ

ಉಡುಪಿ: ಆದಿಉಡುಪಿಯ ಮಧ್ವನಗರದಲ್ಲಿ ರಿಕ್ಷಾ ಚಾಲಕರೊಬ್ಬರು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತರನ್ನು ಆದಿಉಡುಪಿ ರಿಕ್ಷಾ ನಿಲ್ದಾಣದ ಸದಸ್ಯ ಸುರೇಂದ್ರ ಮಧ್ವನಗರ (42) ಎಂದು ಗುರುತಿಸಲಾಗಿದೆ.


ಸರಳ ಸ್ವಭಾವದವರಾಗಿದ್ದ ಸುರೇಂದ್ರ ಅವರು ಒಂದು ವಾರದ ಹಿಂದಷ್ಟೇ ಹೊಸ ರಿಕ್ಷಾವನ್ನು ಖರೀದಿಸಿದ್ದರು ಎಂದು ತಿಳಿದುಬಂದಿದೆ.


ಬುಧವಾರ (ಜು.22) ತಡರಾತ್ರಿ ಕುಟುಂಬದವರು ಮಲಗಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.


ಘಟನೆಯ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮಾಹಿತಿ ಪಡೆದ ಮಲ್ಪೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *