Breaking
21 Sep 2026, Mon

ಅನುಗ್ರಹ ಶಾಲಾ ಶಿಕ್ಷಕರಿಗೆ ಕಾರ್ಯಾಗಾರ

ಉಜಿರೆ : ಅನುಗ್ರಹ ಶಾಲೆಯ ಶಿಕ್ಷಕರಿಗೆ ಶಿಕ್ಷಣದಲ್ಲಿ ತಂತ್ರಜ್ಞಾನ ಹಾಗೂ ಭಾಷಾ ಕೌಶಲ್ಯ ವಿಷಯದ ಕುರಿತಾಗಿ ಒಂದು ದಿನದ ಕಾರ್ಯಾಗಾರವು ಇತ್ತೀಚಿಗೆ ನಡೆಯಿತು.

ವಿಷಯದ ಕುರಿತಾಗಿ ಫಾ! ಸ್ಟಾನಿ ಪಿಂಟೊ ಹಾಗೂ ಫಾ! ಅಶ್ವಿನ್ ಕರ್ಡೊಜಾ ಪ್ರಾಯೋಗಿಕವಾಗಿ ಮಾಹಿತಿ ಹಂಚಿಕೊಂಡರು.

ಕಾರ್ಯಾಗಾರದಲ್ಲಿ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಫಾ! ಅಬೆಲ್ ಲೋಬೊ ಹಾಗೂ ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ ಉಪಸ್ಥಿತರಿದ್ದು, ಶಿಕ್ಷಕರಿಗೆ ಶುಭ ಹಾರೈಸಿದರು.

ಶಿಕ್ಷಕಿ ಜಸಿಂತ ಡಿಕೋಸ್ಟ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *