ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಅಮಾಯಕ ಯುವಕ ಅಬ್ದುಲ್ ರಹೀಮ್ ಹತ್ಯೆಯಲ್ಲಿ ಭಾಗಿಯಾಗಿರುವ ಭರತ್ ಕುಮ್ಡೇಲ್ ಸಹಿತ ಎಲ್ಲ ಆರೋಪಿಗಳನ್ನು ಪೊಲೀಸ್ ಇಲಾಖೆ ಇಂದು ರಾತ್ರಿಯ ಒಳಗೆ ಬಂಧಿಸಬೇಕು. ಬಂಧನವಾಗದೇ ಇದ್ದರೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವುದಲ್ಲದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಸ್ ಡಿಪಿಐ ಮುಖಂಡ ಅನ್ವರ್ ಸಾದಾತ್ ಬಜತ್ತೂರು ಎಚ್ಚರಿಸಿದ್ದಾರೆ.
ಮಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು ಬಜ್ಪೆಯಲ್ಲಿ ರೌಡಿಗಳಿಂದ ಕೊಲೆಯಾದ ಸುಹಾಸ್ ಶೆಟ್ಟಿ ಒಬ್ಬ ರೌಡಿಶೀಟರ್, ಹಿಂದೂ ಯುವಕ ಕೀರ್ತನ್, ಅಮಾಯಕ ಮುಸ್ಲಿಂ ಯುವಕ ಫಾಝಿಲ್ ಹತ್ಯೆಯಲ್ಲಿ ಆತನ ನೇರ ಭಾಗಿಯಾಗಿ ಜೈಲು ಸೇರಿದ್ದವನಾಗಿದ್ದಾನೆ.

ಐದಾರು ಗಂಭೀರ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದವನು.ಅವನ ಕೊಲೆಯನ್ನು ಜಿಲ್ಲೆಯಲ್ಲಿ ಗುಂಪು ಹತ್ಯೆಗೊಳಗಾದ ವಯನಾಡ್ ನ ಅಶ್ರಫ್ ಮತ್ತು ಕೊಳತ್ತಮಜಲಿನ ಅಬ್ದುಲ್ ರಹೀಮ್ ನಂತಹ ಅಮಾಯಕರ ಸಾವಿಗೆ ಹೋಲಿಕೆ ಮಾಡುವುದು ಬೇಡ.

ರೌಡಿಶೀಟರ್ ಸತ್ತಾಗ ಬೃಹತ್ ಪ್ರತಿಭಟನೆಗೆ ಅವಕಾಶ ಕೊಡುವುದು, ಕೋಮು ಪ್ರಚೋದನೆ ಭಾಷಣಕ್ಕೆ ಅವಕಾಶ ಕೊಡುವುದು ಯಾಕೆ..?. ಇದು ರಾಜ್ಯ ಸರಕಾರ, ಗುಪ್ತಚರ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲೆಯ ರಾಜಕಾರಣಿಗಳ ಸಂಪೂರ್ಣ ನಿಷ್ಕ್ರಿಯತೆಯಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ರಿಯಾಜ್ ಕಡಂಬು, ಜಲೀಲ್ ಕೃಷ್ಣಾಪುರ, ಅಶ್ರಫ್ ಅಡ್ಡೂರು ಮತ್ತಿತರರು ಉಪಸ್ಥಿತರಿದ್ದರು.
