Breaking
22 Mar 2026, Sun

ಪಿಜಿಆರ್ಎಸ್ಎಸ್ (PGRSS) ರಾಜ್ಯ ಸಂಚಾಲಕರಾಗಿ ರಕ್ತದಾನಿ ಮಂಜು ನೇಮಕ

ಮೈಸೂರು: ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ಸಂಸ್ಥೆಯ ನೂತನ ರಾಜ್ಯ ಸಂಚಾಲಕರಾಗಿ ರಕ್ತದಾನಿ ಮಂಜು ಅವರನ್ನು ಆಯ್ಕೆ ಮಾಡಲಾಗಿದೆ.

ಪಂಚಾಯತ್ ಗ್ರಾಮೀಣಾಭಿವೃದ್ಧಿ ರೈತರ ಸೇವಾ ಸಮಿತಿ ನೋಂದಣಿಯಾದ ಒಂದು ಪ್ರಮುಖ ಸಂಸ್ಥೆಯಾಗಿದೆ. ಹಾಗೂ ನಿರಾಶ್ರಿತರು ಮತ್ತು ವೃದ್ಧರ ಬೃಂದಾವನ ಸಂಸ್ಥೆಯಾಗಿಯೂ ಕೆಲಸ ಮಾಡುತ್ತಿದೆ.

ಪಿ ಜಿ ಆರ್ ಎಸ್ ಎಸ್ ಗೆ ನೂತನ ರಾಜ್ಯ ಸಂಚಾಲಕರಾಗಿ ರಕ್ತದಾನಿ ಮಂಜು ಅವರನ್ನು ಆಯ್ಕೆ ಮಾಡಿರುವುದಾಗಿ ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್ ಅವರು ತಿಳಿಸಿದ್ದಾರೆ.

ರಕ್ತದಾನಿ ಮಂಜು ಅವರು ಮೂರು ವರ್ಷಗಳಿಂದ ರಕ್ತದಾನ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಸ್ವತಃ ರಕ್ತದಾನ ಮಾಡುವ ಮೂಲಕ ಜೀವ ರಕ್ಷಕನಾಗಿ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ಅವರನ್ನು ರಾಜ್ಯ ಸಂಚಾಲಕರಾಗಿ ಆಯ್ಕೆ ಮಾಡಿ ಜವಾಬ್ದಾರಿಯನ್ನು ನೀಡಿದ್ದೇವೆ ಎಂದು ಯಾದವ್ ಹರೀಶ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *