Breaking
21 Mar 2026, Sat

ವಿಜಯಡ್ಕ: ಸಂತ ಲಾರೆನ್ಸ್ ದೇವಾಲಯದ ಧರ್ಮಗುರುಗಳು ವರ್ಗಾವಣೆ

ವಿಜಯಡ್ಕ: ಸಂತ ಲಾರೆನ್ಸ್ ದೇವಾಲಯ ವಿಜಯಡ್ಕ ಇಲ್ಲಿ ಧರ್ಮಗುರುಗಳಾಗಿದ್ದ ವಂ| ಫಾ| ಎಡ್ವಿನ್ ಸಂತೋಷ್ ಮೊನಿಸ್ ಅವರು ವೇಣೂರಿನ ‘ಕ್ರಿಸ್ತರಾಜ’ ದೇವಾಲಯಕ್ಕೆ ಧರ್ಮಗುರುಗಳಾಗಿ ವರ್ಗವಾಣೆಯಾಗಿದ್ದಾರೆ.

6 ವರ್ಷ ಧರ್ಮಗುರುಗಳಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಇವರಿಗೆ ಸಮಸ್ತ ಕ್ರೈಸ್ತ ಬಾಂಧವರು ಹೃತ್ಪೂರ್ವಕ ಧೃನ್ಯವಾದ ತಿಳಿಸಿದ್ದಾರೆ.

ಬೋರಿಮಾರ್ ಸಂತ ಜೋಸೆಫರ ದೇವಾಲಯದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದ ವಂ|ಫಾ| ನವೀನ್ ಪ್ರಕಾಶ್ ಡಿಸೋಜ ಅವರು ವಿಜಯಡ್ಕ ಸಂತ ಲಾರೆನ್ಸ್ ದೇವಾಲಯದಲ್ಲಿ ಧರ್ಮಗುರುಗಳಾಗಿ ಮುಂದುವರಿಯಲಿದ್ದಾರೆ.

Leave a Reply

Your email address will not be published. Required fields are marked *