“ವಿಪಕ್ಷ ನಾಯಕನ ದಿಗ್ಬಂಧನ ಖಂಡನೀಯ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಆಕ್ರೋಶ”

ಬಂಟ್ವಾಳ: ರಾಜ್ಯ ಬಿಜೆಪಿ ವಿಪಕ್ಷ ನಾಯಕನ ದಿಗ್ಬಂಧನ ಖಂಡನೀಯ ನಡೆಯಾಗಿದ್ದು,ಕಾಂಗ್ರೇಸ್ ನ ಪರೋಕ್ಷ ಬೆಂಬಲ ರಾಜ್ಯಕ್ಕೆ ನಾಚಿಕೇಡಿನ ವಿಚಾರ ಎಂದು ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಶೋಷಿತ ಸಮುದಾಯಗಳ ಮುಖಂಡರಾಗಿರುವ ಛಲವಾದಿ ಟಿ ನಾರಾಯಣಸ್ವಾಮಿ ಅವರನ್ನು ಚಿತ್ತಾಪುರದ ಅತಿಥಿ ಗೃಹದಲ್ಲಿ ದಿಗ್ಬಂಧನದಲ್ಲಿರಿಸಿದ್ದ ಘಟನೆ ಅತ್ಯಂತ ಖಂಡನೀಯವಾಗಿದ್ದು, ರಾಜ್ಯದಲ್ಲಿನ ಗೃಹ ಇಲಾಖೆಯ ವೈಫಲ್ಯ ಕೂಡ ಎದ್ದುಕಾಣುತ್ತಿದೆ.

ನಾರಾಯಣಸ್ವಾಮಿಯವರು ಕಾಂಗ್ರೆಸ್ ಗೂಂಡಾ ಬೆಂಬಲಿಗರ ದಿಗ್ಭಂದನ ಅನುಭವಿಸಿದ್ದು ಕರ್ನಾಟಕದಲ್ಲಿ ಪಾಳೆಗಾರಿಕೆ ಸಂಸ್ಕೃತಿಯ ಜೀವಂತಿಕೆಯನ್ನು ಪ್ರತಿಬಿಂಬಿಸಿದೆ.

ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅಶಾಂತಿಯ ವಾತಾವರಣ ಕಂಡುಬಂದಿವೆ, ನಿತ್ಯ ಗೊಂದಲದ ಮತ್ತು ಜನರಿಗೆ ರಕ್ಷಣೆ ಇಲ್ಲದೆ ಭಯದ ವಾತಾವರಣ ನಿರ್ಮಾಣವಾಗಿದೆ.


ಪೋಲೀಸರು ಸರಕಾರದ ಕೈಗೊಂಬೆಯಂತೆ ವರ್ತಿಸುವುದು ಸರಿಯಲ್ಲ, ಕಾನೂನು ಕೈಮೀರದಂತೆ ಜನರ ರಕ್ಷಣೆ ಗೃಹ ಇಲಾಖೆ ನೋಡಿಕೊಳ್ಳುವುದು ಬಿಟ್ಟು ಗೂಂಡಾಗಳಿಗೆ ರಕ್ಷಣೆ ನೀಡುವ ಕಾರ್ಯಗಳು ಸರಿಯಲ್ಲ. ವಿಪಕ್ಷದ ನಾಯಕರೊಬ್ಬರಿಗೆ ರಕ್ಷಣೆ ನೀಡಲಾರದ ಪರಿಸ್ಥಿತಿ ಪೋಲೀಸ್ ಇಲಾಖೆಗೆ ಬಂದೊದಗಿದೆ ಎಂದಾದರೆ ಇನ್ನು ಜನ ಸಾಮಾನ್ಯರ ಸ್ಥಿತಿ ಏನಾಗಬೇಕಿದೆ. ಛಲವಾದಿ ಅವರಿಗಾದ ಘಟನೆ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿದೆ ಮತ್ತು ಸಂವಿಧಾನಕ್ಕೆ ಗೌರವವೂ ಇಲ್ಲ ಎನ್ನುವುದು ನಾರಾಯಣಸ್ವಾಮಿಯವರ ದಿಗ್ಬಂಧನ ಸಾಕ್ಷಿ ಹೇಳುತ್ತಿದೆ.

ಶೋಷಿತ ಸಮಾಜದ ಜನರ ರಕ್ಷಣೆ ಬಗ್ಗೆ ಮಾತನಾಡುವ ಕಾಂಗ್ರೆಸ್ ಗೆ ಒಬ್ಬ ಶೋಷಿತ ಸಮುದಾಯಗಳ ನಾಯಕನಿಗೆ ರಕ್ಷಣೆ ನೀಡಲು ಸಾಧ್ಯವಾಗಲಿಲ್ಲ ಎಂದಾದರೆ ಇವರಿಗೆ ಯಾವ ನೈತಿಕತೆ ಇದೆ.

ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರಿಗೆ ಸೂಕ್ತ ಭದ್ರತೆ ಒದಗಿಸಿ ದಿಬ್ಬಂದನ ವಿಧಿಸಿದ ಗೂಂಡಾಗಳ ಮೇಲೆ ಕ್ರಮಜರುಗಿಸಬೇಕೆಂದು ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಆಗ್ರಹಿಸುತ್ತೇನೆ.

Leave a Reply

Your email address will not be published. Required fields are marked *