Breaking
22 Mar 2026, Sun

ಮಂಗಳೂರಿನಿಂದ ಹೊರಟ್ಟಿದ್ದ ಹಡಗು ಮುಳುಗಡೆ : ಕೋಸ್ಟ್‌ ಗಾರ್ಡ್‌ ನಿಂದ 6 ಮಂದಿ ಸಿಬ್ಬಂದಿಯ ರಕ್ಷಣೆ

ಮಂಗಳೂರು: ಕರ್ನಾಟಕ ಕರಾವಳಿಯ ಮಂಗಳೂರಿನ ನೈರುತ್ಯಕ್ಕೆ ಸುಮಾರು 60 ನಾಟಿಕಲ್ ಮೈಲು ದೂರದಲ್ಲಿ ಮಂಗಳೂರು ನಗರದ ಬಂದರ್‌ ನಿಂದ ಲಕ್ಷದ್ವೀಪಕ್ಕೆ ಹೊರಟ್ಟಿದ್ದ ʼಎಂಎಸ್‌ವಿ ಸಲಾಮತ್ʼ ಎಂಬ ಹೆಸರಿನ ಸರಕು ಸಾಗಣೆಯ ಹಡಗು ಮೇ 15ರಂದು ಮುಳುಗಡೆಯಾಗಿದೆ.

ಸಿಮೆಂಟ್, ಕಟ್ಟಡ ಸಾಮಗ್ರಿಯನ್ನು ಒಳಗೊಂಡ ಸರಕುಗಳನ್ನು ಹೇರಿಕೊಂಡು ಮೇ 12ರಂದು ಹೊರಟಿದ್ದ ಹಡಗು ಬೃಹತ್‌ ಅಲೆಯೊಂದಕ್ಕೆ ಸಿಲುಕಿ ಮುಳುಗಡೆಯಾಗಿದೆ ಎಂದು ತಿಳಿದು ಬಂದಿದೆ.

ಈ ವೇಳೆ ಹಡಗಿನಲ್ಲಿದ್ದ 6 ಮಂದಿ ಸಿಬ್ಬಂದಿಯನ್ನು ಕೋಸ್ಟ್‌ಗಾರ್ಡ್ ರಕ್ಷಿಸಿದೆ. ಆದರೆ ಹಡಗು ಮುಳುಗಡೆಗೆ ನಿಜವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.

Leave a Reply

Your email address will not be published. Required fields are marked *