ಶ್ರೀನಗರ: ಆಪರೇಷನ್ ಸಿಂಧೂರ್ ಬಳಿಕ ಗಡಿಯಲ್ಲಿ ಭಾರತೀಯ ಸೇನೆಯು ಉಗ್ರರನ್ನು ಸದೆ ಬಡಿಯುವ ಕೆಲಸವನ್ನು ಮುಂದುವರೆಸಿದೆ.
ಈ ನಿಟ್ಟಿನಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ನ ಜಿನ್ಪಥರ್ ಕೆಲ್ಲರ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಮೂವರು ಲಷ್ಕರ್-ಎ-ತೈಬಾ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

ಈ ಪ್ರದೇಶದಲ್ಲಿ ಮತ್ತೊಬ್ಬ ಭಯೋತ್ಪಾದಕ ಇರುವ ಸಾಧ್ಯತೆಯನ್ನು ಭದ್ರತಾ ಪಡೆ ವ್ಯಕ್ತಪಡಿಸಿದ್ದು,ಆತನಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆಸಿದೆ.
ಇದಕ್ಕೂ ಮೊದಲು ಕುಲ್ಗಾಮ್ನಲ್ಲಿ ಎನ್ಕೌಂಟರ್ ಪ್ರಾರಂಭವಾಯಿತು. ನಂತರ ಈ ಕಾರ್ಯಾಚರಣೆಯು ಶೋಪಿಯಾನ್ನ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಗೊಂಡಿದೆ. ಈ ವೇಳೆ ಸೇನೆ ಮತ್ತು ಅರೆಸೈನಿಕ ಪಡೆಗಳ ಭದ್ರತಾ ಸಿಬ್ಬಂದಿ ಸುಮಾರು 2 ಗಂಟೆಗಳ ಕಾಲ ಭಯೋತ್ಪಾದಕರ ವಿರುದ್ಧ ಹೋರಾಟ ಮಾಡಿದ್ದಾರೆ.ಗುಪ್ತಚರ ಮಾಹಿತಿಯ ನಂತರ ಭದ್ರತಾ ಪಡೆಗಳು ಭಯೋತ್ಪಾದಕರನ್ನು ತಡೆದಿವೆ.
ಸೇನೆಯ ಈ ಕಾರ್ಯಾಚರಣೆಯಲ್ಲಿ ಲಷ್ಕರ್ ಎ ತೊಯ್ಬಾದ ಮುಖ್ಯ ಕಮಾಂಡರ್ ಲಷ್ಕರ್ ಎ ತೊಯ್ಬಾ ಮುಖ್ಯ ಕಮಾಂಡರ್ ಶಾಹಿದ್ ಕುಟ್ಟಾಯ, ಶೋಪಿಯಾನ್ನ ಹೀರ್ಪೋರಾ ನಿವಾಸಿಯಾಗಿದ್ದ ಶಾಹಿದ್ ಕುಟ್ಟಾಯ ಭಾರತೀಯ ಸೇನಾಪಡೆಯ ಗುಂಡೇಟಿಗೆ ಬಲಿಯಾಗಿದ್ದಾರೆ.
ಹತ್ಯೆಯಾದ 3ನೇ ಉಗ್ರ ಅದ್ನಾನ್ ಶಫಿ ದಾರ್ ಬಗ್ಗೆ ಇನ್ನೂ ಯಾವುದೇ ಮಾಹಿತಿ ದೊರೆತಿಲ್ಲ.
