Breaking
22 Sep 2026, Tue

ಆಪರೇಷನ್ ಸಿಂಧೂರ್ ನಲ್ಲಿ ಕಮಾಲ್ ಮಾಡುತ್ತಿರುವ ಬೆಂಗಳೂರಿನ ಆತ್ಮಾಹುತಿ ಡ್ರೋನ್ಗಳು

ಬೆಂಗಳೂರು: ಭಾರತೀಯ ಸೇನೆಯ ಆಪರೇಷನ್ ಸಿಂಧೂರ್” ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಮಹತ್ವದ ಮಾಹಿತಿಯೊಂದು ಮಾಧ್ಯಮಗಳಿಗೆ ಲಭ್ಯವಾಗುತ್ತಿದೆ.

ಹೌದು ಭಾರತೀಯ ಸೇನೆಯ “ಆಪರೇಷನ್ ಸಿಂಧೂರ್”ನಲ್ಲಿ ಬಳಸಲಾದ ಈ ಆತ್ಮಹುತಿ ಡ್ರೋನ್ಗಳು ಬೆಂಗಳೂರಿನಲ್ಲಿ ತಯಾರಾಗಿವೆ.

ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಜಂಟಿಯಾಗಿ ನಡೆಸಿದ “ಆಪರೇಷನ್ ಸಿಂಧೂರ್”ನಲ್ಲಿ ಈ ಆತ್ಮಾಹುತಿ ಡ್ರೋನ್ಗಳು ನಮ್ಮ ದೇಶ ಗೆಲುವು ಪಡೆಯುವುದಕ್ಕೆ ಪ್ರಮುಖ ಪಾತ್ರ ವಹಿಸಿವೆ.

ಇನ್ನು ಈ ಆತ್ಮಾಹುತಿ ಡ್ರೋನ್ ಅಥವಾ ಲಾಯ್ಟರಿಂಗ್ ಮ್ಯೂನಿಷನ್ ಒಂದು ರೀತಿಯ ಸ್ವಯಂಚಾಲಿತ ಆಯುಧವಾಗಿದೆ.

ಇವು ಸಾಮಾನ್ಯ ಡ್ರೋನ್ಗಳಂತೆ ಗಾಳಿಯಲ್ಲಿ ಹಾರಾಡುತ್ತವೆ, ಆದರೆ ಗುರಿಯನ್ನು ಪತ್ತೆ ಹಚ್ಚಿದ ಬಳಿಕ ನೇರವಾಗಿ ದಾಳಿ ಮಾಡಿ ಸ್ಫೋಟಗೊಳ್ಳುತ್ತವೆ.

ಅದಕ್ಕಾಗಿಯೇ ಇವುಗಳನ್ನು “ಕಾಮಿಕಾಜೆ ಡ್ರೋನ್ಗಳು” ಎಂದೂ ಕರೆಯುತ್ತಾರೆ. ಬಾಲಕೋಟ್ ದಾಳಿ ಬಳಿಕ ಈ ಡ್ರೋನ್ಗಳನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ

Leave a Reply

Your email address will not be published. Required fields are marked *