ಪುತ್ತೂರು: ಕಳೆದ ಎಂಟು ದಶಕಗಳಿಂದ ಗ್ರಾಹಕರ ಪ್ರೀತಿಗೆ ಪಾತ್ರವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನಲ್ಲಿ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಎಂಬಂತೆ ವಜ್ರ ಪರೀಕ್ಷೆಯ ಲ್ಯಾಬ್ರೋನ್ ಡೈಮಂಡ್ ಟೆಸ್ಟರ್ ಎಂಬ ಹೆಸರಿನ ಯಂತ್ರವನ್ನು ಅಳವಡಿಸಲಾಗಿದೆ.
ಯಾಕಂದ್ರೆ ಚಿನ್ನದಲ್ಲಿ ಕಲಬೆರಕೆ ಇದ್ದಂತೆ ಇತ್ತೀಚಿನ ದಿನಗಳಲ್ಲಿ ವಜ್ರದಲ್ಲೂ ಕಲಬೆರಕೆಗಳಂತಹ ಪ್ರಕರಣಗಳು ಹೆಚ್ಚಾಗುತ್ತಿವೆ.ಈ ನಿಟ್ಟಿನಲ್ಲಿ ಇತ್ತ ಗ್ರಾಹಕರು ಸಂಸ್ಥೆಯ ಮೇಲೆ ಇಟ್ಟಿರುವ ವಿಶ್ವಾಸವನ್ನು ಗಮನದಲ್ಲಿ ಇಟ್ಟುಕೊಂಡು ಮುಳಿಯ ಜ್ಯುವೆಲ್ಲರಿ ಶಾಪ್‌ನಲ್ಲೂ ವಜ್ರ ಪರೀಕ್ಷೆಯ ಈ ಯಂತ್ರವನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ.

ಹೆಚ್ಚಾಗಿ ನಾವು ಇಂತಹ ಯಂತ್ರಗಳನ್ನು ಕೇವಲ ವಜ್ರ ತಯಾರಿಸುವ ದೊಡ್ಡ ದೊಡ್ಡ ಫ್ಯಾಕ್ಟರಿಗಳಲ್ಲಿ ಮಾತ್ರ ಕಾಣಬಹುದಾಗಿತ್ತು. ಆದ್ರೆ ಇದೀಗ ನಮ್ಮ ಪುತ್ತೂರಿನ ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನಲ್ಲೂ ವಜ್ರ ಪರೀಕ್ಷೆಯ ಉತ್ತಮ ಮಟ್ಟದ ಈ ಯಂತ್ರವನ್ನು ಅವಳವಡಿಕೆ ಮಾಡಿರುವುದು ಗ್ರಾಹರಲ್ಲಿ ಸಂತಸ ಹೆಚ್ಚಾಗುವುದಕ್ಕೆ ಕಾರಣವಾಗಿದೆ.
ಇನ್ನು ವಜ್ರ ಪರೀಕ್ಷೆಯ ಯಂತ್ರವನ್ನು ಸಂಸ್ಥೆಯಲ್ಲಿ ಅಳವಡಿಸಲಾಗಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನ ಕೃಷ್ಣ ನಾರಾಯಣ ಮುಳಿಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಯಂತ್ರವು ಆಭರಣಗಳಲ್ಲಿ ಅಳವಡಿಸಲಾದ ವಜ್ರಗಳು ಅಸಲಿಯೋ,ನಕಲಿಯೋ ಎನ್ನೋವ ಸತ್ಯವನ್ನು ಗ್ರಾಹಕರ ಮುಂದೆಯೇ ತೆರೆದಿಡುತ್ತದೆ. ಲ್ಯಾಬ್ರೋನ್ ಡೈಮಂಡ್ ಟೆಸ್ಟರ್ ಎಂದು ಕರೆಯಲ್ಪಡುವ ಈ ಯಂತ್ರದಲ್ಲಿ ವಜ್ರದ ಹರಳನ್ನು ಇಟ್ಟ ತಕ್ಷಣವೇ ಯಂತ್ರ ಪರೀಕ್ಷೆಗೆ ಒಳಪಡಿಸಿದ ವಜ್ರ ಅಸಲಿಯೋ, ನಕಲಿಯೋ ಅನ್ನೋದನ್ನ ತಿಳಿಸುತ್ತದೆ.

ಇತ್ತೀಚಿನ ದಿನಗಳಲ್ಲಿ ಕೆಲವು ರಾಸಾಯನಿಕಗಳನ್ನು ಬಳಸಿ ವಜ್ರಗಳನ್ನು ಫ್ಯಾಕ್ಟರಿಗಳಲ್ಲಿ ತಯಾರಿಸಲಾಗುತ್ತಿದ್ದು, ನೋಡಲು ಮತ್ತು ಗುಣಮಟ್ಟದಲ್ಲಿ ಅಸಲಿಗೆ ಸರಿಸಾಟಿಯಾಗುವ ರೀತಿಯಲ್ಲಿ ಈ ವಜ್ರಗಳಿರುತ್ತವೆ. ಆದರೆ ನೈಸರ್ಗಿಕವಾಗಿ ಸಿಗುವ ವಜ್ರಗಳು ದಿನಗಳು ಕಳೆದಂತೆ ತನ್ನ ಹೊಳಪು ಮತ್ತು ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸಗಳಿಲ್ಲದೆ ನೈಸರ್ಗಿಕವಾಗಿಯೇ ಇರುತ್ತವೆ. ಆದರೆ ಲ್ಯಾಬ್ರೋ ಡೈಮಂಡ್‌ಗಳಲ್ಲಿ ಕಾಲಕ್ರಮೇಣ ಹೊಳಪು ಮತ್ತು ಗುಣಮಟ್ಟದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ.

ಲ್ಯಾಬ್ರೋ ಡೈಮಂಡ್ ಗಳನ್ನು ಗ್ರಾಹಕನ ಜೊತೆಗೆ ಮಾರಾಟಗಾರರೂ ಸುಲಭವಾಗಿ ಗುರುತಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ತಮ್ಮ ಬಳಿಗೆ ಬರುವ ಗ್ರಾಹಕರು ವಜ್ರದಲ್ಲಿ ಮೋಸ ಹೋಗಬಾರದು ಎನ್ನುವ ಉದ್ಧೇಶದಿಂದ ಜ್ಯುವೆಲ್ಲರಿ ಶಾಪ್ ಗಳಲ್ಲಿ ಇದೇ ಮೊದಲ ಬಾರಿಗೆ ಈ ಯಂತ್ರವನ್ನು ಅಳಪಡಿಸಲಾಗಿದೆ. ಗ್ರಾಹಕರ ಮುಂದೆಯೇ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬಾರದಿರಲಿ ಎನ್ನುವ ಕಾರಣಕ್ಕೆ ಅಳವಡಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.


