Breaking
19 Sep 2026, Sat

ಕಳೆದ ಮೂರು ದಿನಗಳಲ್ಲಿ ಭಾರತ ತೊರೆದ ಕನಿಷ್ಠ 536 ಪಾಕಿಸ್ತಾನಿಯರು

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಈಗಾಗಲೇ ಯುದ್ಧದ ಭೀತಿ ಶುರುವಾಗಿದ್ದು ಅಟ್ಟಾರಿ-ವಾಘಾ ಗಡಿ ದಾಟುವ ಮೂಲಕ ಕಳೆದ ಮೂರು ದಿನಗಳಲ್ಲಿ ಕನಿಷ್ಠ 536 ಪಾಕಿಸ್ತಾನಿಯರು ಭಾರತ ತೊರೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು 12 ವರ್ಗದ ಅಲ್ಪಾವಧಿ ವೀಸಾ ಹೊಂದಿರುವವರಿಗೆ ಭಾರತದಲ್ಲಿ ಉಳಿಯಲು ನೀಡಲಾಗಿದ್ದ ಗಡುವು ಭಾನುವಾರ ಮುಕ್ತಾಯಗೊಳ್ಳಲಿದೆ. ಈನಿಟ್ಟಿನಲ್ಲಿ ಇನ್ನೂ ಅನೇಕ ಪಾಕಿಸ್ತಾನಿಗಳು ತಾಯ್ನಾಡಿಗೆ ಮರಳುವ ಸಾಧ್ಯತೆಯಿದೆ.

ಇತ್ತ 14 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 850 ಭಾರತೀಯ ನಾಗರಿಕರು ಪಾಕಿಸ್ತಾನದಿಂದ ಪಂಜಾಬ್‌ನ ಅಂತರರಾಷ್ಟ್ರೀಯ ಗಡಿಯ ಮೂಲಕ ಭಾರತಕ್ಕೆ ಮರಳಿದ್ದಾರೆ ಎಂದರು.

ಏಪ್ರಿಲ್ 27ರಂದು ಅಟ್ಟಾರಿ-ವಾಘಾ ಗಡಿ ದಾಟುವಿಕೆಯ ಮೂಲಕ ಒಂಬತ್ತು ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 237 ಪಾಕಿಸ್ತಾನಿ ಪ್ರಜೆಗಳು ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ ಏಪ್ರಿಲ್ 25 ರಂದು 191 ಜನರು, ಮತ್ತು ಏಪ್ರಿಲ್ 26 ರಂದು 81 ರಾಜತಾಂತ್ರಿಕ ಸೇರಿದಂತೆ 116 ಭಾರತೀಯ ಪ್ರಜೆಗಳು ಭಾನುವಾರ ಅಟ್ಟಾರಿ-ವಾಘಾ ಗಡಿ ದಾಟುವ ಮೂಲಕ ತಮ್ಮ ತಾಯ್ನಾಡಿಗೆ ಮರಳಿದ್ದಾರೆ.

ಏಪ್ರಿಲ್ 25 ರಂದು 287 ಭಾರತೀಯ ನಾಗರಿಕರು ದೇಶಕ್ಕೆ ಮರಳಿದರೆ ,ಏಪ್ರಿಲ್ 26 ರಂದು 13 ರಾಜತಾಂತ್ರಿಕರು ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 342 ಭಾರತೀಯರು ಈ ಮಾರ್ಗದ ಮೂಲಕ ದೇಶಕ್ಕೆ ಮರಳಿದ್ದಾರೆ ಎಂದರು.

ಏ. 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಭಾರತ ಸರ್ಕಾರ ಪಾಕಿಸ್ತಾನಿ ನಾಗರಿಕರು ಭಾರತವನ್ನು ತೊರೆಯುವಂತೆ ಸೂಚಿಸಿತ್ತು.

Leave a Reply

Your email address will not be published. Required fields are marked *