Breaking
20 Jun 2026, Sat

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನೂತನ ಜಿಲ್ಲಾ ನಿರ್ದೇಶಕರಾಗಿ ಪ್ರಭಾಕರ್ ಎಚ್ ಹುಲಿಮೇರು ಆಯ್ಕೆ

ಬೆಳ್ತಂಗಡಿ: ಇಂದು ನಡೆದ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ಆಡಳಿತ ಮಂಡಳಿ ನಿರ್ದೇಶಕ ಚುನಾವಣೆಯಲ್ಲಿ ಪುತ್ತೂರು ವಿಭಾಗದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ದಿಸಿದ್ದ ಆರಂಬೋಡಿ ಹಾಲು ಉತ್ಪಾದಕರ ಸಂಘ ದ ಅಧ್ಯಕ್ಷ ಪ್ರಭಾಕರ್ ಎಚ್ ಹುಲಿಮೇರು (ಬಿಜೆಪಿ ಬೆಂಬಲಿತ) ಪ್ರಚಂಡ ಮತಗಳಿಂದ ಜಯಶಾಲಿಯಾಗಿ ಮುಂದಿನ 5 ವರ್ಷಗಳ ಅವಧಿಗೆ ನೂತನ ಜಿಲ್ಲಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಪ್ರಸ್ತುತ ಇವರು ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಎರಡನೇ ಅವಧಿ ಅಧ್ಯಕ್ಷರಾಗಿದ್ದು, ಆರಂಬೋಡಿ ಗ್ರಾಮ ಪಂಚಾಯತ್ ಸದಸ್ಯರಾಗಿದ್ದು ಮಾಜಿ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಹೊಕ್ಕಾಡಿಗೋಳಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *