ಸಿದ್ದಕಟ್ಟೆ: ವಕ್ಫ್ ತಿದ್ದುಪಡಿ ಮಸೂದೆ ಜಾರಿ ಮಾಡುವುದರ ವಿರುದ್ಧ ಪಶ್ಚಿಮ ಬಂಗಾಲದಲ್ಲಿ ಆಕ್ರೋಶ ಬುಗಿಳೆದ್ದಿದ್ದು, ಪ್ರತಿಭಟನೆ ನೆಪದಲ್ಲಿ ಮುಸ್ಲಿಂ ಸಂಘಟನೆಗಳು ಹಿಂಸಾಚಾರ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮದ್ಯ ಪ್ರವೇಶಿಸಿ ಪಶ್ಚಿಮ ಬಂಗಾಲದಲ್ಲಿ ರಾಷ್ಟಪತಿ ಆಳ್ವಿಕೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಬಿಜೆಪಿ ಬಂಟ್ವಾಳ ಮಂಡಲ ಕಾರ್ಯದರ್ಶಿ ಪ್ರಭಾಕರ್ ಪ್ರಭು ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆ ಜಾರಿ ಮಾಡುವುದರ ವಿರುದ್ಧ ಪಶ್ಚಿಮ ಬಂಗಾಲದಲ್ಲಿ ಬುಗಿಲೆದ್ದ ಬಹು ಸಂಖ್ಯಾತ ಮುಸ್ಲಿಂ ಸಂಘಟನೆಗಳು ಮುರ್ಷಿದಾಬಾದ್ ನಿಂದ ಹಿಡಿದು ಇಡೀ ಪಶ್ಚಿಮ ಬಂಗಾಲ ದಲ್ಲಿ ನಡೆಸಿದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಸಾವಿರಾರು ಮಂದಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳನ್ನು ಹತ್ತಿಕ್ಕಿ ಕೊಂದು, ಹಿಂಸೆ ಮಾಡಿರುವುದಲ್ಲದೆ ಮನೆ ಮಠ,ಜಮೀನು ಬಿಟ್ಟು ಓಡಿ ಹೋಗುವಂತೆ ನಿರಂತರವಾಗಿ ಬೆದರಿಕೆ ಹಾಕುವ ಮೂಲಕ ಹೆದರಿಸುತ್ತಿದ್ದಾರೆ.
ಪಶ್ಚಿಮ ಬಂಗಾಲ ದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಗಳು ದಿನದಿಂದ ದಿನಕ್ಕೆ ಬಾರಿ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದರೂ ಸಹ ಪಶ್ಚಿಮ ಬಂಗಾಲ ಸರಕಾರ ಮಾತ್ರ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದಿಟ್ಟ ಕಾನೂನು ಕ್ರಮ ಜರುಗಿಸಲು ಹಿಂಜರಿಯುತ್ತಿದೆ.
ಪಶ್ಚಿಮ ಬಂಗಾಲ ರಾಜ್ಯ ದಲ್ಲಿ ನಡೆಯುತ್ತಿರುವ ಹಿಂಚಾರದ ವಿದ್ಯಮಾನಗಳನ್ನು ಮತ್ತು ದುಘ೯ಟನೆಗಳು ಟಿ. ವಿ. ದ್ರಶ್ಯ ಮಾಧ್ಯಮ ಗಳಲ್ಲಿ ನೋಡಿದ ದೇಶದ ಜನ ಸಾಮಾನ್ಯರು ಇತರ ಕಡೆಗಳಲ್ಲಿಯೂ ಇದೇ ಮಾದರಿಯ ಘಟನೆಗಳು ಹಬ್ಬಿಕೊಳ್ಳುವ ಭಯ ಭೀತಿಯಲ್ಲಿದ್ದಾರೆ. ಅಲ್ಪ ಸಂಖ್ಯಾತ ಹಿಂದೂಗಳು ರಕ್ಷಣೆ ಇಲ್ಲದೆ ಸಂತ್ರಸ್ತರಾಗಿದ್ದಾರೆ ಅಲ್ಲದೇ ವಸತಿ, ಊಟ ಇಲ್ಲದೆ ನಿರ್ಗತಿಕರಾಗಿದ್ದಾರೆ. ಈ ರೀತಿಯ ಭಯಾನಕ ಹಿಂಸಾಚಾರ ದೂಘಟನೆ ಗಳನ್ನು ಹತ್ತಿಕ್ಕುವಲ್ಲಿ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಸರಕಾರ ಸಂಪೂರ್ಣ ವಿಫಲ ವಾಗಿದೆ ಹಾಗೂ ವಕ್ಫ್ ತಿದ್ಫುಪಡಿ ಮಸೂದೆ ಜಾರಿಗೆ ವಿರೋಧ ವ್ಯಕ್ತ ಪಡಿಸುವುದರಿಂದಲೂ ಇಂತಹ ಘಟನೆಗಳು ಆ ರಾಜ್ಯ ದಲ್ಲಿ ಮುಂದಿನ ದಿನಗಳಲ್ಲಿ ನಿರಂತರ ವಾಗಿ ಉಲ್ಬಣ ಗೊಳ್ಳುವ ಸಂಭವಗಳು ಇವೆ.
ಈ ಎಲ್ಲ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲ ರಾಜ್ಯ ದಲ್ಲಿನ ಅಲ್ಪ ಸಂಖ್ಯಾತ ಹಿಂದೂಗಳು ನೆಮ್ಮದಿಯ, ಶಾಂತಿಯುತ ಜೀವನ ನಡೆಸಲು ಅನುಕೂಲ ಮಾಡಿಕೊಳ್ಳಳು ಸಹಕಾರಿ ಯಾಗುವಂತೆ ಕ್ರೂರಿ ಪಶ್ಚಿಮ ಬಂಗಾಲ ಸರಕಾರ ವನ್ನು ವಜಾ ಗೊಳಿಸಿ ರಾಜ್ಯ ದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರುವಂತೆ ಈ ಮೂಲಕ ವಿನಂತಿ ಮಾಡುವ ಮೂಲಕ ಅಗ್ರಹ ಪಡಿಸುತ್ತೇನೆ, ಎಂದು ಮನವಿ ಮಾಡಿದ್ದಾರೇ.



